ಮಸಾಜ್ ಪಾರ್ಲರ್‌ ನಲ್ಲಿ ಲೈಂಗಿಕ ದಂಧೆ: ಕಿರುಕುಳಕ್ಕೊಳಗಾದ ಯುವತಿಯ ರಕ್ಷಣೆ - Mahanayaka
7:22 PM Thursday 12 - December 2024

ಮಸಾಜ್ ಪಾರ್ಲರ್‌ ನಲ್ಲಿ ಲೈಂಗಿಕ ದಂಧೆ: ಕಿರುಕುಳಕ್ಕೊಳಗಾದ ಯುವತಿಯ ರಕ್ಷಣೆ

massage parlor
14/04/2022

ದೆಹಲಿ: 27 ವರ್ಷದ ಮಹಿಳೆಯನ್ನು ದೆಹಲಿ ಮಹಿಳಾ ಆಯೋಗವು ಸೆಕ್ಸ್ ರಾಕೆಟ್‌ನಿಂದ ರಕ್ಷಣೆ ಮಾಡಲಾಗಿದೆ. ಉತ್ತರ ದೆಹಲಿಯ ಮಸಾಜ್ ಪಾರ್ಲರ್‌ ಸೆಕ್ಸ್ ರಾಕೆಟ್ ಕೇಂದ್ರೀಕೃತವಾಗಿದ್ದು, ಮಸಾಜ್ ಪಾರ್ಲರ್‌ನಲ್ಲಿ ಲೈಂಗಿಕ ದಂಧೆ ನಡೆಯುತ್ತಿದೆ ಎಂದು ಸೋಮವಾರ ದೆಹಲಿ ಮಹಿಳಾ ಆಯೋಗಕ್ಕೆ ದೂರು ಬಂದಿತ್ತು.  ಈ ದೂರಿನ ಅನ್ವಯ ದಾಳಿ ಮಾಡಲಾಗಿದೆ.

ಮಸಾಜ್ ಪಾರ್ಲರ್‌ ನಲ್ಲಿ 27 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಕೇಸು ದಾಖಲಾಗಿತ್ತು. ಈ ಸಂಬಂಧ ದೂರು ಸ್ವೀಕರಿಸಿದ ಕೂಡಲೇ ಮಹಿಳಾ ಆಯೋಗದ ತಂಡ ದೆಹಲಿ ಪೊಲೀಸರೊಂದಿಗೆ ಪಾರ್ಲರ್‌ಗೆ ಆಗಮಿಸಿ ಮಹಿಳೆಯನ್ನು ರಕ್ಷಿಸಿದೆ ಎಂದು ಮಹಿಳಾ ಆಯೋಗ ಸ್ಪಷ್ಟಪಡಿಸಿದೆ.

ಕೆಲಸ ಅರಸಿ ಆಜಾದ್‌ ಪುರದ ಜಸ್ಟೀಸ್ ಟವರ್‌ ನಲ್ಲಿರುವ ಗೇಟ್‌ವೇ ಮಸಾಜ್ ಪಾರ್ಲರ್‌ ಗೆ ಮಹಿಳೆ ಬಂದಿದ್ದಳು. ಈ ವೇಳೆ ಆಕೆಗೆ ಮತ್ತು ಬರುವ ಪಾನೀಯ ನೀಡಲಾಗಿತ್ತು. ಆಕೆ  ಪ್ರಜ್ಞೆ ತಪ್ಪಿದ ಬಳಿಕ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು, ಪಾರ್ಲರ್ ಮುಚ್ಚುವಂತೆ ಪೊಲೀಸರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ.  ‘ಸ್ಪಾ ಮಸಾಜ್ ಸೆಂಟರ್‌ ಗಳ ಹೆಸರಿನಲ್ಲಿ ಸೆಕ್ಸ್ ರಾಕೆಟ್‌ ಗಳು ಕಾರ್ಯನಿರ್ವಹಿಸುತ್ತವೆ ಎಂದು ನಾವು ಪದೇ ಪದೇ ಹೇಳುತ್ತಿದ್ದೇವೆ.

ದೆಹಲಿಯಲ್ಲಿ ಇಂತಹ ಅನೇಕ ಸ್ಥಳಗಳಿವೆ ಎಂದು ತಿಳಿದಿದೆ.  ಸಾವಿರಾರು ಸ್ಪಾ ಮಸಾಜ್ ಪಾರ್ಲರ್‌ ಗಳು ಈಗ ಸೆಕ್ಸ್ ರಾಕೆಟ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ವಾತಿ ಹೇಳುತ್ತಾರೆ.  ಇಂತಹ ಸಂಸ್ಥೆಗಳ ವಿರುದ್ಧ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧರಾಗಬೇಕು ಎಂದು ಸ್ವಾತಿ ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಷ್ಯಾದ ಬೃಹತ್ ಯುದ್ಧನೌಕೆಯನ್ನು ಸ್ಫೋಟಿಸಿದ ಉಕ್ರೇನ್

ರಷ್ಯಾ ಸೈನಿಕರ ಅತ್ಯಾಚಾರದ ಪರಿಣಾಮ ಗರ್ಭಿಣಿಯರಾದ 9 ಮಂದಿ ಉಕ್ರೇನ್ ಮಹಿಳೆಯರು

ಉಡುವಿನ ಮೇಲೆ ಲೈಂಗಿಕ ಕಿರುಕುಳ: ನಾಲ್ವರು ಆರೋಪಿಗಳ ಬಂಧನ

ಹುಟ್ಟೂರಿಗೆ ತಲುಪಿದ ಹಿಂದೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಪಾರ್ಥಿವ ಶರೀರ

ಸಿಎಂ ಬೊಮ್ಮಾಯಿ ಕಾರಿಗೆ ಎಸ್‌ ಡಿಪಿಐ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರರ್ದಶನ

 

ಇತ್ತೀಚಿನ ಸುದ್ದಿ