ಎಸ್ ಡಿಪಿಐ ಕಾರ್ಯಕರ್ತನ ಕೊಲೆ ನಡೆದು 24 ಗಂಟೆಯೊಳಗೆ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ! - Mahanayaka
10:08 AM Thursday 12 - December 2024

ಎಸ್ ಡಿಪಿಐ ಕಾರ್ಯಕರ್ತನ ಕೊಲೆ ನಡೆದು 24 ಗಂಟೆಯೊಳಗೆ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ!

shri nevass
16/04/2022

ಪಾಲಕ್ಕಾಡ್: ಆರೆಸ್ಸೆಸ್ ಮುಖಂಡನನ್ನುಶುಕ್ರವಾರ ಮಧ್ಯಾಹ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಾಲಕ್ಕಾಡ್ ಮೇಲೆ ಮುರಿಯಿಲ್ ನಲ್ಲಿ ನಡೆದಿದೆ.ಮೃತರನ್ನು ಶ್ರೀನಿವಾಸನ್ ಎಂದು ಗುರುತಿಸಲಾಗಿದೆ.

ಶ್ರೀನಿವಾಸನ್ ಒಡೆತನದ ಎಸ್.ಕೆ. ಆಟೊ ರಿಪೇರಿ ಅಂಗಡಿಗೆ ಬಂದ ದುಷ್ಕರ್ಮಿಗಳು ಮಚ್ಚು ಮತ್ತು ಮಾರಕಾಸ್ತ್ರಗಳಿಂದ ಶ್ರೀನಿವಾಸನ್ ಅವರನ್ನು ಕೊಚ್ಚಿ ಹಾಕಿದ್ದಾರೆ. ಈ ವೇಳೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಇತೀಚೆಗಷ್ಟೇ ಎಸ್ ಡಿಪಿಐ ಕಾರ್ಯಕರ್ತ ಜುಬೇರ್ ಹತ್ಯೆ ನಡೆದಿದ್ದು, ಇದರ ಗಾಯ ಮಾಸುವ ಮುನ್ನವೇ ಮತ್ತೊಂದು ಹತ್ಯೆ ಯತ್ನ ನಡೆದಿದೆ.

ಶ್ರೀನಿವಾಸನ್ ಹತ್ಯೆಯು ಪಾಲಕ್ಕಾಡ್ ಉತ್ತರ ಕಸಬಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹತ್ಯೆಯ ಹಿಂದೆ ಎಸ್ ಡಿಪಿಐ ಕೈವಾಡವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೃಷ್ಣಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಪೋಲಿಸರು ಪ್ರಕರಣದಾಖಲಿಸಿ ತನಿಖೆ ನಡೆಸುತ್ತಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಪಾಲಕ್ಕಾಡ್ ನಲ್ಲಿ ಎಸ್ ಡಿಪಿಐ ಮುಖಂಡ ಜುಬೈರ್ ಹತ್ಯೆ ನಡೆದು 24 ಗಂಟೆಯೊಳಗೆ ಶ್ರೀನಿವಾಸನ್ ಹತ್ಯೆಯೂ ನಡೆದಿದೆ. ಜುಬೈರ್ ತನ್ನ ತಂದೆಯೊಂದಿಗೆ ಜುಮಾ ನಮಾಝ್ ಮುಗಿಸಿ ಬೈಕ್ ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಎರಡು ಕಾರುಗಳಲ್ಲಿ ಬಂದ ಅಪರಿಚಿತರ ಗುಂಪೊಂದು ಆತನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದೆ ಕುಳಿತಿದ್ದ ತಂದೆಯನ್ನು ಗಾಡಿಯಿಂದ ತಳ್ಳಿ ಹಾಕಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ ನಡೆದು 24 ಗಂಟೆಗಳಲ್ಲಿ ಮತ್ತೊಂದು ಕೊಲೆ ನಡೆದಿದ್ದು, ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿಯಿಂದ ಹಲಾಲ್ ಆದ ಮೊಟ್ಟ ಮೊದಲ ಸಚಿವ ಈಶ್ವರಪ್ಪ | ಸತೀಶ್ ಜಾರಕಿಹೊಳಿ ವ್ಯಂಗ್ಯ

ಪತ್ನಿ, ಮಕ್ಕಳನ್ನು ಒಬ್ಬೊಬ್ಬರಾಗಿ ಹತ್ಯೆ ಮಾಡಿ ನೇಣಿಗೆ ಶರಣಾದ ಪತಿ

ಬೊಮ್ಮಾಯಿ ಅಂದ್ರೆ ನಾನು ಏನೋ ಅಂದುಕೊಂಡಿದ್ದೆ… | ಡಿ.ಕೆ.ಶಿವಕುಮಾರ್

ಭಾರೀ ಚಿನ್ನದ ಬೇಟೆ:  ಒಂದೂವರೆ ಕೋಟಿ ಚಿನ್ನ  ವಶ

ಸಂತೋಷ್ ಪಾಟೀಲ್ ಮೊಬೈಲ್ ನಲ್ಲಿತ್ತು 88 ಮಿಸ್ಡ್ ಕಾಲ್?

 

ಇತ್ತೀಚಿನ ಸುದ್ದಿ