ತಾಳಿಕಟ್ಟುವ ಶುಭ ವೇಳೆ, ವರನನ್ನು ಎತ್ತಾಕೊಂಡು ಹೋದ ಪೊಲೀಸರು! - Mahanayaka
1:00 PM Thursday 12 - December 2024

ತಾಳಿಕಟ್ಟುವ ಶುಭ ವೇಳೆ, ವರನನ್ನು ಎತ್ತಾಕೊಂಡು ಹೋದ ಪೊಲೀಸರು!

18/04/2022

ಭೋಪಾಲ್: ತಾಳಿ ಕಟ್ಟಲು ಕೆಲವೇ ನಿಮಿಷಗಳು ಬಾಕಿ ಉಳಿದಿರುವಾಗಲೇ ಪೊಲೀಸರು ವರರನ್ನು ಅರೆಸ್ಟ್ ಮಾಡಿದ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ.

ವಧುವಿಗೆ ತಾಳಿ ಕಟ್ಟುವ ಮೊದಲು ಮೆರವಣಿಗೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ.  ಸಂಬಂಧಿಕರು, ವಧುವಿನ ಕಡೆಯವರು ಸಂಭ್ರಮದಲ್ಲಿರುವಾಗಲೇ ಏಕಾಏಕಿ ಬಂದ ಪೊಲೀಸರು ವರನನ್ನು ಅರೆಸ್ಟ್ ಮಾಡಿದ್ದಾರೆ.

ಅನುಜ್ ದುಬೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತ ವಿವಾಹದ ಆಮಿಷ ನೀಡಿ ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ್ದು, ಬಳಿಕ ಆಕೆಗೆ ವಂಚಿಸಿ, ಮತ್ತೊಂದು ವಿವಾಹವಾಗಲು ಮುಂದಾಗಿದ್ದ. ಇದೇ ವೇಳೆ ಸಂತ್ರಸ್ತೆ ಈತನ ವಿರುದ್ಧ ದೂರು ನೀಡಿದ್ದು, ತಾಳಿಕಟ್ಟಲು ಕೆಲವೇ ಕ್ಷಣಗಳಿರುವ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಬಲ್ಪುರ್ ಲಾರ್ಡ್ ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ಸಂತ್ರಸ್ತ ಯುವತಿಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದ ಅನುಜ್ ದುಬೆ ಬಳಿಕ ಹೊಟೇಲ್ ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಇದೀಗ ಬೇರೆ ಯುವತಿಯೊಂದಿಗೆ ವಿವಾಹಕ್ಕೆ ಸಜ್ಜಾಗಿದ್ದ ಆರೋಪಿಗೆ  ಪೊಲೀಸರು ಶಾಕ್ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಲೆಯ ಎದುರೇ 10ನೇ ತರಗತಿಯ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಸ್ನೇಹಿತರು

ಆಕ್ಷೇಪಾರ್ಹ ಪೋಸ್ಟ್ ಹರಡಿದ ಬಜರಂಗದಳದ ಕಿಡಿಗೇಡಿಯ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

ಹಿಂದುತ್ವದಿಂದ ಚುನಾವಣೆ ಗೆಲ್ಲಬಹುದು ಎನ್ನುವ ಬಿಜೆಪಿಯ ನಿರೀಕ್ಷೆಗೆ ಶಾಕ್ ನೀಡಿದ ಯಡಿಯೂರಪ್ಪ ಹೇಳಿಕೆ!

ಪರ್ಸಂಟೇಜ್ ಪಿತಾಮಹಾ ಸಿದ್ದರಾಮಯ್ಯ:  ಕುಮಾರಸ್ವಾಮಿ ಟ್ವೀಟ್ ಬಾಣ

ಮಂಗಳೂರು: ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: ಐವರು ಕಾರ್ಮಿಕರ ದಾರುಣ ಸಾವು

 

 

ಇತ್ತೀಚಿನ ಸುದ್ದಿ