ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ಠಾಕೂರರು!: ವಿಡಿಯೋ ವೈರಲ್ - Mahanayaka
10:23 PM Thursday 12 - December 2024

 ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ಠಾಕೂರರು!: ವಿಡಿಯೋ ವೈರಲ್

uttar pradesh
19/04/2022

ರಾಯ್ ಬರೇಲಿ:  ಅಪ್ರಾಪ್ತ ವಯಸ್ಸಿನ ದಲಿತ ಬಾಲಕನನ್ನು ಠಾಕೂರ್ ಸಮುದಾಯಕ್ಕೆ ಸೇರಿದ ಯುವಕರು ತಮ್ಮ ಕಾಲು ನೆಕ್ಕಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ವೇತನವನ್ನು ದಲಿತ ಬಾಲಕ ಮಾಲಿಕರ ಬಳಿಯಲ್ಲಿ ಕೇಳಿದ್ದು, ಇದಕ್ಕಾಗಿ ಈ ರೀತಿಯ ದುಷ್ಕೃತ್ಯವನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.

2.30 ನಿಮಿಷಗಳ ವಿಡಿಯೋದಲ್ಲಿ ಠಾಕೂರ್ ಸಮುದಾಯದ ಯುವಕನೋರ್ವ ಬೈಕ್ ನಲ್ಲಿ ಕುಳಿತುಕೊಂಡು ದಲಿತ ಬಾಲಕನ ಕಿವಿ ಹಿಡಿದು ತನ್ನ ಕಾಲು ನೆಕ್ಕುವಂತೆ ಬಲವಂತವಾಗಿ ನೆಲಕ್ಕೆ ದೂಡುತ್ತಿರುವ ದೃಶ್ಯ ಕಂಡು ಬಂದಿದೆ.

ಸುಮಾರು 6ರಿಂದ 8ಮಂದಿ ಯುವಕರು ಈ ಕೃತ್ಯ ನಡೆಸಿದ್ದು, ಇವರ ಕೃತ್ಯದಿಂದ ಬೆದರಿ ನಡುಗುತ್ತಿರುವ ದಲಿತ ಬಾಲಕನನ್ನು ಕಂಡು  ಯುವಕರು ಗಹಗಹಿಸಿ ನಗುತ್ತಿದ್ದು, ಒಬ್ಬಾತ ತನ್ನ ಸಹಚರನನ್ನು ಠಾಕೂರ್ ಎಂದು ಕರೆಯುತ್ತಿರುವುದು ಕೇಳಿ ಬಂದಿದೆ.

ಇನ್ನೂ ಇಂತಹ ತಪ್ಪು ಮಾಡುತ್ತೀಯಾ? ಎಂದು ಬಾಲಕನಿಗೆ ತಂಡ ಹಲ್ಲೆ ನಡೆಸಿ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಇನ್ನೊಂದು ವಿಡಿಯೋದಲ್ಲಿ ಬಾಲಕನಿಗೆ ಗಾಂಜಾ ಸೇದಿಸಲು ಬಲವಂತ ಮಾಡುತ್ತಿರುವುದು ಕಂಡು ಬಂದಿದೆ.

ಏಪ್ರಿಲ್ 10ರಂದು ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆದ ಬಳಿಕ ಬಾಲಕ ಪೊಲೀಸರಿಗೆ ದೂರು ನೀಡಿದ್ದು, ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಸಂತ್ರಸ್ತ ಬಾಲಕ 10ನೇ ತರಗತಿ ಬಾಲಕ ಎಂದು ತಿಳಿದು ಬಂದಿದ್ದು, ತನ್ನ ತಂದೆಯನ್ನು ಕಳೆದುಕೊಂಡಿರುವ ಬಾಲಕ ತಾಯಿಯ ಆರೈಕೆಯಲ್ಲಿದ್ದಾನೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಲೆಯಲ್ಲಿ ಸರಣಿ ಬಾಂಬ್ ಸ್ಫೋಟ: ಮಕ್ಕಳ ಸಹಿತ 6 ಮಂದಿಯ ದಾರುಣ ಸಾವು

ಕೋವಿಡ್ ಅನಿರೀಕ್ಷಿತ ಏರಿಕೆ: ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ

ಮತ್ತೆ ಕ್ಷಿಪಣಿ ದಾಳಿ ಆರಂಭಿಸಿದ ರಷ್ಯಾ: 17 ಉಕ್ರೇನ್ ನಾಗರಿಕರ ಹತ್ಯೆ

ಅಮರಾವತಿಯಲ್ಲಿ ಜನಾಂಗೀಯ ಗಲಭೆ, ನಿಷೇಧಾಜ್ಞೆ ಹೇರಿಕೆ:  23 ಜನ ಬಂಧನ

ಕುಟುಂಬ ಸಹಿತ ಪ್ರಯಾಣಿಸುತ್ತಿದ್ದ ಐಎಎಸ್ ಅಧಿಕಾರಿಯ ಕಾರು ಪಲ್ಟಿ

 

ಇತ್ತೀಚಿನ ಸುದ್ದಿ