ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ! - Mahanayaka
7:17 PM Thursday 12 - December 2024

ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ!

bangalore news
19/04/2022

ಬೆಂಗಳೂರು: ಅಶ್ಲೀಲ ವಿಡಿಯೋಗಳ ದಾಸನಾಗಿದ್ದ ಪತಿಯೋರ್ವ ವಿಡಿಯೋದಲ್ಲಿದ್ದ ಮಹಿಳೆ ತನ್ನ ಪತ್ನಿ ಎಂದು ಭಾವಿಸಿ, ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಮನಗರ ಪಟ್ಟಣದಲ್ಲಿ ನಡೆದಿದೆ.

40 ವರ್ಷ ವಯಸ್ಸಿನ ಜಹೀರ್ ಪಾಶಾ ಹತ್ಯೆ ಆರೋಪಿಯಾಗಿದ್ದು, ಈತನ ಪತ್ನಿ 35 ವರ್ಷ ವಯಸ್ಸಿನ ಮುಬೀನಾ ಹತ್ಯೆಯಾದ ಮಹಿಳೆಯಾಗಿದ್ದಾರೆ. ಅಶ್ಲೀಲ ವಿಡಿಯೋ ನೋಡುವ ವಿಪರೀತ ಚಟ ಹೊಂದಿದ್ದ ಜಹೀರ್ ಪಾಶಾ, ತಾನು ನೋಡಿದ್ದ ಅಶ್ಲೀಲ ವಿಡಿಯೋದಲ್ಲಿರುವ ಮಹಿಳೆ ತನ್ನ ಪತ್ನಿ ಎಂದು ಭಾವಿಸಿ ಪತ್ನಿಯ ಶೀಲದ ಬಗ್ಗೆ ಶಂಕಿಸಲು ಆರಂಭಿಸಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಕುಟುಂಬದ ಕಾರ್ಯಕ್ರಮವೊಂದಲ್ಲಿ ಎಲ್ಲರ ಎದುರೇ ಪತ್ನಿಯನ್ನು ಥಳಿಸಿದ್ದ ಎನ್ನಲಾಗಿದೆ.

ಈ ಘಟನೆಯ ಬಳಿಕವೂ ಈತನ ರಾದ್ಧಾಂತ ಮುಗಿದಿರಲಿಲ್ಲ. ಭಾನುವಾರ ಇದೇ ವಿಚಾರಕ್ಕೆ ಮತ್ತೆ ಜಗಳ ಆರಂಭಿಸಿದ್ದ ಜಹೀರ್ ಪತ್ನಿಯನ್ನು ಮಕ್ಕಳ ಎದುರೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರಿಗೆ ಮಹಿಳೆಯ ಪುತ್ರ ತಿಳಿಸಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ಈ ಜೋಡಿ ಮದುವೆಯಾಗಿದ್ದರು ಎನ್ನಲಾಗಿದೆ. ಇದೀಗ ಪತಿಯ ಚಟ, ಅನುಮಾನಕ್ಕೆ ಪತ್ನಿ ಪ್ರಾಣ ಕಳೆದುಕೊಂಡಿದ್ದಾಳೆ. ತಾಯಿ ಸಾವಪ್ಪಿದ್ದು, ತಂದೆ ಜೈಲು ಪಾಲಾಗಿ ಮಕ್ಕಳು ಅನಾಥರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರು -ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

 ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ಠಾಕೂರರು!: ವಿಡಿಯೋ ವೈರಲ್

ಶಾಲೆಯಲ್ಲಿ ಸರಣಿ ಬಾಂಬ್ ಸ್ಫೋಟ: ಮಕ್ಕಳ ಸಹಿತ 6 ಮಂದಿಯ ದಾರುಣ ಸಾವು

ಕೋವಿಡ್ ಅನಿರೀಕ್ಷಿತ ಏರಿಕೆ: ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ

ಮತ್ತೆ ಕ್ಷಿಪಣಿ ದಾಳಿ ಆರಂಭಿಸಿದ ರಷ್ಯಾ: 17 ಉಕ್ರೇನ್ ನಾಗರಿಕರ ಹತ್ಯೆ

ಇತ್ತೀಚಿನ ಸುದ್ದಿ