ಯಡಿಯೂರಪ್ಪರಿಂದ ಬೆಳೆದ ಯತ್ನಾಳ್, ಅವರ ವಿರುದ್ಧವೇ ಕತ್ತಿಮಸೆಯುತ್ತಿದ್ದಾರೆ: ದಿಂಗಾಲೇಶ್ವರ ಶ್ರೀ ತಿರುಗೇಟು - Mahanayaka
5:13 PM Thursday 12 - December 2024

ಯಡಿಯೂರಪ್ಪರಿಂದ ಬೆಳೆದ ಯತ್ನಾಳ್, ಅವರ ವಿರುದ್ಧವೇ ಕತ್ತಿಮಸೆಯುತ್ತಿದ್ದಾರೆ: ದಿಂಗಾಲೇಶ್ವರ ಶ್ರೀ ತಿರುಗೇಟು

dingaleshwara swamiji vs yathnal
20/04/2022

ಗದಗ: ಶಿರಹಟ್ಟಿಯ ಫಕೀರ್ ಮಠದ ದಿಂಗಾಲೇಶ್ವರ ಶ್ರೀ(Dinaleshwara Swmaiji)ಗಳು ತಮ್ಮ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದು,  ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ(B. S. Yediyurappa) ಪರ ನಿಂತಿದ್ದು ಸತ್ಯ. ಆದರೆ ಯಾವ ಕಾರಣಕ್ಕಾಗಿ ಅವ್ರನ್ನು ಪದಚ್ಯುತಿ ಮಾಡ್ತೀರಿ ಅಂತ ಅಂದು ಪ್ರಶ್ನೆ ಮಾಡಿದ್ದೆ. ಜೊತೆಗೆ ಯಡಿಯೂರಪ್ಪ ಕೆಳಗಿಳಿಸಲು ಕಾರಣ ಕೂಡ ಕೇಳಿದ್ದೇವೆ. ರಾಜ್ಯಕ್ಕೆ ಅವರ ಕೊಡುಗೆ  ತುಂಬಾ ಇದೆ. ಹೀಗಾಗಿಯೇ ಅಂದು 500 ಮಠಾಧೀಶರನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದು ರಾಜ್ಯಕ್ಕೆ ಗೊತ್ತಿರುವ ವಿಷಯ. ಅವತ್ತುಯಡಿಯೂರಪ್ಪರನ್ನು ಬೆಂಬಲಿಸಿದ್ದರ ಫಲವಾಗಿ ಇಂದು ಲಿಂಗಾಯತ ಸಿಎಂ ಆಗಿ ಉಳಿಕೊಂಡಿದ್ದಾರೆ ಅನ್ನೋದು ಸಮಾಜ ಅರ್ಥ ಮಾಡುಕೊಳ್ಳಲಿ‌ ಎಂದು ಹೇಳಿದರು.

ಯಾವ ಯಡಿಯೂರಪ್ಪರಿಂದ ಯತ್ನಾಳ್(Basanagouda Patil Yatnal) ಬೆಳೆದ್ರೋ, ಅದೇ ಯಡಿಯೂರಪ್ಪ ವಿರುದ್ಧ ಯತ್ನಾಳ ಕತ್ತಿ ಮಸೆಯುತ್ತಿದ್ದಾರೆ. ಇದು ಇಡೀ ರಾಜ್ಯಕ್ಕೆ ಗೊತ್ತಿದೆ. ಯತ್ನಾಳರ ತತ್ವ ಸಿದ್ಧಾಂತ, ವ್ಯಕ್ತಿತ್ವ ಮತ್ತು ಯಡಿಯೂರಪ್ಪ ಅವರ  ವ್ಯಕ್ತಿತ್ವ, ದಿಂಗಾಲೇಶ್ವರ ಶ್ರೀಗಳ ವ್ಯಕ್ತಿತ್ವ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಶ್ರೀಗಳು ತಿರುಗೇಟು ನೀಡಿದರು.

ದಿಂಗಾಲೇಶ್ವರ ಶ್ರೀಗಳು ಅನ್ಯಾಯದ ವಿರುದ್ಧ ಹೋರಾಟ ಮಾಡ್ತಾರೆಯೇ ಹೊರತು ಸ್ವಾರ್ಥವಿಲ್ಲ. ನಮ್ಮ ಹೋರಾಟ ಹತ್ತಿಕ್ಕುವುದು ನಿಮ್ಮಿಂದ ಅಸಾಧ್ಯ. ನಾನು ಗೌರವಾನ್ವಿತ ಸನ್ಯಾಸಿ, ಮಠಾಧಿಪತಿ ಇದ್ದೇನೆ. ಏನು ಮಾತನಾಡಬೇಕು ಅನ್ನೋ ಪರಿಜ್ಞಾನ ನನಗಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಸ್ಸಿನ ಕಿಟಕಿ ತೆರೆಯುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಚಾಲಕನ ಬಂಧನ

ವೀಕ್ಷಕರ ನಿರೀಕ್ಷೆ ಸುಳ್ಳಾಗಿಸಿದ ಕೆಜಿಎಫ್ ಚಾಪ್ಟರ್  2: ನೆಗೆಟಿವ್ ವಿಮರ್ಶೆ

ಚಿತ್ರೀಕರಣಕ್ಕೆ ನಿರ್ಮಿಸಿದ ಮನೆಯನ್ನು ಮೀನುಗಾರರಿಗೆ ನೀಡಲು ಮುಂದಾದ ನಟ ಸೂರ್ಯ

ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ!

ಅಮರಾವತಿಯಲ್ಲಿ ಜನಾಂಗೀಯ ಗಲಭೆ, ನಿಷೇಧಾಜ್ಞೆ ಹೇರಿಕೆ:  23 ಜನ ಬಂಧನ

ಇತ್ತೀಚಿನ ಸುದ್ದಿ