ಅವಳಿ ಮಕ್ಕಳಿಗೆ ಹಾಲುಣಿಸುತ್ತಿದ್ದ ವೇಳೆ ಕುಸಿದುಬಿದ್ದು ತಾಯಿ ಸಾವು - Mahanayaka
6:08 PM Thursday 12 - December 2024

ಅವಳಿ ಮಕ್ಕಳಿಗೆ ಹಾಲುಣಿಸುತ್ತಿದ್ದ ವೇಳೆ ಕುಸಿದುಬಿದ್ದು ತಾಯಿ ಸಾವು

thrisur mother
23/04/2022

ವಡಕ್ಕೆಕಾಡ್(ತ್ರಿಶೂರ್): ನವಜಾತ ಶಿಶುವಿಗೆ ಹಾಲು ಕುಡಿಸುವ ವೇಳೆ ಕುಸಿದು ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮೃತಪಟ್ಟಿದ್ದಾರೆ.

ಮೃತರನ್ನು ಕೊಚನೂರಿನ ಮೇಲೇರಿಪರಂಬಿಲ್ ನಿವಾಸಿ ಸನೀಶಾ (27) ಎಂದು ಗುರುತಿಸಲಾಗಿದೆ.  ಮಾರ್ಚ್ 29 ರಂದು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಸನೀಶಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಸನೀಶಾ  ಅವರು ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಮಗುವಿಗೆ ಹಾಲುಣಿಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ತ್ರಿಶೂರ್ ಅಮಲಾ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ  ವೆಂಟಿಲೇಟರ್‌ನಲ್ಲಿದ್ದು  ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದೇ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ಸನೀಶಾ ಪರಪೂರ್ ಮುಳ್ಳೂರು ಕಾಞಂಗಾಡ್ ಮನೆಯ ಕುಟ್ಟಪ್ಪನ್ ಮತ್ತು ವಸಂತಿ ದಂಪತಿಯ ಪುತ್ರಿಯಾಗಿದ್ದು, ಇವರ ಪತಿ ರಾಜೇಶ್ ಮಲೇಷ್ಯಾದಲ್ಲಿ ಕೆಲಸದಲ್ಲಿದ್ದರು. ಸದ್ಯ ಊರಿನಲ್ಲಿಯೇ ನೆಲೆಸಿದ್ದಾರೆ  ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಾಲಿ ರೈಡ್:  ಬೈಕ್ ಸಹಿತ ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ಸಿನಿಮಾದಲ್ಲಿ ಕುಡಿಯೋದು ಸೇದುವುದು ತಪ್ಪಾದರೆ, ಅನುಮತಿ ನೀಡಿರುವ ಸರ್ಕಾರ ಸರಿಯೇ? | ನಟ ಉಪೇಂದ್ರ ಪ್ರಶ್ನೆ

ಧಮ್ ಇದ್ರೆ, ಎಸ್‌ ಡಿಪಿಐ, ಆರ್‌ಎಸ್‌ಎಸ್, ಬಜರಂಗಳವನ್ನು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲ್

ಸ್ವಲ್ಪವಾದರೂ ಗಂಡಸ್ತನ ತೋರಿಸಿ: ಪ್ರಮೋದ್ ಮುತಾಲಿಕ್ ಆಕ್ರೋಶ

ಇತ್ತೀಚಿನ ಸುದ್ದಿ