ಗೂಗಲ್ ಡೂಡಲ್ ನಲ್ಲಿ ಕಾಣಿಸಿಕೊಂಡ ನಾಜಿಹಾ ಸಲೀಂ ಯಾರು ?
Google ಡೂಡಲ್ ಕಾಣಿಸಿಕೊಂಡ ನಾಜಿಹಾ ಸಲೀಂ, ಸಮಕಾಲೀನ ಇರಾಕಿನ ಕಲಾವಿದೆ. 2020ರಲ್ಲಿ ಅದೇ ದಿನ, ‘ಬಾರ್ಗೀಲ್ ಆರ್ಟ್ ಫೌಂಡೇಶನ್’ ನಸಿಹಾ ಇವರನ್ನು ಕೂಡ ಮಹಿಳಾ ಕಲಾವಿದರ ಸಂಗ್ರಹದಲ್ಲಿ ಸೇರಿಸಲಾಗಿತ್ತು.
ನಿನ್ನೆ ಡೂಡಲ್ ಇವರನ್ನು ಗೌರವಿಸುವ ಮೂಲಕ, ಗೂಗಲ್ ನಸಿಹಾ ಅವರ ಚಿತ್ರಕಲೆ ಶೈಲಿಯನ್ನು ಮತ್ತು ಕಲಾ ಜಗತ್ತಿಗೆ ಅವರು ನೀಡಿದ ದೀರ್ಘಾವಧಿಯ ಕೊಡುಗೆಯನ್ನು ಸ್ಮರಿಸಿದೆ. ನಸೀಹಾ ಅವರು 1927 ರಲ್ಲಿ ಟರ್ಕಿಯ ಇಸ್ತಾನ್ ಬುಲ್ ನಲ್ಲಿ ಇರಾಕಿನ ಕಲಾವಿದರ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ವರ್ಣಚಿತ್ರಕಾರರಾಗಿದ್ದರು ಮತ್ತು ತಾಯಿ ಕಸೂತಿ(ಎಂಬ್ರಾಯ್ಡರಿ) ಕಲಾವಿದರಾಗಿದ್ದರು. ಆಕೆಗೆ ಮೂವರು ಸಹೋದರರು ಎಲ್ಲರೂ ಕಲೆಯಲ್ಲಿಯೇ ವೃತ್ತಿ ಜೀವನ ಮಾಡುತಿದ್ದರು. ಸಹೋದರರಲ್ಲಿ ಒಬ್ಬರಾದ ಜವಾದ್ ಸಲೀಂ, ಇರಾಕ್‌ನ ಅತ್ಯಂತ ಪ್ರಭಾವಶಾಲಿ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. . ನಸಿಹಾ ಅವರ ಕೃತಿಗಳು ಸಾಮಾನ್ಯವಾಗಿ ಗ್ರಾಮೀಣ ಇರಾಕಿನ ಮಹಿಳೆಯರು ಮತ್ತು ರೈತರ ಜೀವನವನ್ನು ಚಿತ್ರಿಸುತ್ತದೆ.
ಬಾಗ್ದಾದ್ ಇನ್ ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್‌ನಿಂದ ಪದವಿ ಪಡೆದ ನಂತರ, ನಸೀಹಾ ಪ್ಯಾರಿಸ್ ನ ಎಕೋಲ್ ನ್ಯಾಷನಲ್ ಸುಪೀರಿಯರ್ ಡೆಸ್ ಬ್ಯೂಕ್ಸ್-ಆರ್ಟ್ಸ್‌ನಲ್ಲಿ ವಿದ್ಯಾರ್ಥಿವೇತನದಲ್ಲಿ ಅಧ್ಯಯನ ಮಾಡಿದರು. ಪ್ಯಾರಿಸ್ ನಲ್ಲಿದ್ದಾಗ, ಭಿತ್ತಿಚಿತ್ರಗಳಲ್ಲಿ ಪರಿಣತಿ ಹೊಂದಿದ್ದರು. ವಿದೇಶದಲ್ಲಿ ವರ್ಷಗಳ ಕಾಲ ಕಳೆದ ನಂತರ ಅವರು ಬಾಗ್ದಾದ್ ಗೆ ಮರಳಿದರು. ಅವರು ತಮ್ಮ ನಿವೃತ್ತಿಯವರೆಗೂ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ನಲ್ಲಿ ಪ್ರಾಧ್ಯಾಪಕರಾಗಿದ್ದರು.ಅದೇ ರೀತಿ ನಸೀಹಾ ಅವರು ಕಲಾವಿದರ ಗುಂಪಿನ ಅಲ್-ರುವ್ವಾದ್ ನ ಸ್ಥಾಪಕ ಸದಸ್ಯರಲ್ಲಿ ಕೂಡ ಒಬ್ಬರು.
ನಸೀಹಾ ಸಲೀಂ , ಇರಾಕ್ ಕಾಂಟೆಂಪರರಿ ಆರ್ಟ್ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಇದು ಇರಾಕ್‌ನಲ್ಲಿ ಆಧುನಿಕ ಕಲಾ ಚಳುವಳಿಯ ಆರಂಭಿಕ ಬೆಳವಣಿಗೆಯನ್ನು ತೋರಿಸುತ್ತಿದೆ. ಈವಾಗ ನಸಿಹಾ ಅವರ ಕೃತಿಗಳನ್ನು ಶಾರ್ಜಾ ಆರ್ಟ್ ಮ್ಯೂಸಿಯಂ ಮತ್ತು ಇರಾಕಿ ಆರ್ಕೈವ್ಸ್ ಆಫ್ ಮಾಡರ್ನ್ ಆರ್ಟ್‌ನಲ್ಲಿ ಇರಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಪ್ರಾಪ್ತ ಬಾಲಕಿಗೆ ನಂಬರ್ ಕೊಟ್ಟ ಕಂಡೆಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ ಬಾಲಕಿಯ ತಾಯಿ: ವಿಡಿಯೋ ವೈರಲ್
ಪರೀಕ್ಷೆಗೆ ಓದುತ್ತಿದ್ದ ವೇಳೆ ಟೆರೆಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು
ಇನ್ನೆಷ್ಟು ದಿನ ಇರಲಿದೆ ಅಕಾಲಿಕ ಮಳೆ? | ಹವಾಮಾನ ಇಲಾಖೆ ಹೇಳಿದ್ದೇನು?