ಮನೆಯೊಳಗೆ ಸ್ಫೋಟಗೊಂಡ ಎಲೆಕ್ಟ್ರಿಕ್ ಬೈ ಕ್‌ ನ ಬ್ಯಾಟರಿ: ಓರ್ವ ಸಾವು, ಮಹಿಳೆಯ ಸ್ಥಿತಿ ಗಂಭೀರ - Mahanayaka
11:49 AM Thursday 12 - December 2024

ಮನೆಯೊಳಗೆ ಸ್ಫೋಟಗೊಂಡ ಎಲೆಕ್ಟ್ರಿಕ್ ಬೈ ಕ್‌ ನ ಬ್ಯಾಟರಿ: ಓರ್ವ ಸಾವು, ಮಹಿಳೆಯ ಸ್ಥಿತಿ ಗಂಭೀರ

battery explosion
24/04/2022

ಅಮರಾವತಿ: ಎಲೆಕ್ಟ್ರಿಕ್ ಬೈ ಕ್‌ ನ ಬ್ಯಾಟರಿ ಸ್ಫೋಟಗೊಂಡು 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮೃತರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ವಿಜಯವಾಡದಲ್ಲಿ ಈ ದುರಂತ ನಡೆದಿದ್ದು , ಮಲಗುವ ಕೋಣೆಯಲ್ಲಿ ಇಟ್ಟಿದ್ದ ಬ್ಯಾಟರಿ ಸ್ಫೋಟಗೊಂಡಿದೆ.  ಸ್ಫೋಟದಲ್ಲಿ ಮನೆಗೆ ಹಾನಿಯಾಗಿದ್ದು, ಸ್ಟೋಟದ ವೇಳೆ ಉಂಟಾದ ಹೊಗೆಯಿಂದಾಗಿ ಮನೆಯಲ್ಲಿದ್ದ ಮಕ್ಕಳು ಅಸ್ವಸ್ಥಗೊಂಡಿದ್ದರು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಡಿಟಿಪಿ ಕೆಲಸ ಮಾಡುತಿದ್ದರ ಕೆ.ಶಿವಕುಮಾರ್ ಶುಕ್ರವಾರ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದಾರೆ.  ಶುಕ್ರವಾರ ರಾತ್ರಿ ಅವರ ಮಲಗುವ ಕೋಣೆಯಲ್ಲಿ ವಾಹನದಿಂದ ತೆಗೆದ  ಬ್ಯಾಟರಿಯನ್ನು ಚಾರ್ಜ್ ಮಾಡಲು ಇಟ್ಟಿದ್ದರು.  ಬೆಳಗ್ಗಿನ ವೇಳೆ ಎಲ್ಲರೂ ನಿದ್ದೆಯಿಂದ ಏಳುವ ಮೊದಲು ಬ್ಯಾಟರಿ ಸ್ಫೋಟಗೊಂಡಿದೆ ಎಂದು ಸೂರ್ಯರಾವ್‌ ಪೇಟೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿ.ಜಾನಕಿ ರಾಮಯ್ಯ ತಿಳಿಸಿದ್ದಾರೆ.

ಸ್ಫೋಟದಿಂದ ಇಡೀ ಮನೆಗೆ ಬೆಂಕಿ ವ್ಯಾಪಿಸಿದ್ದು, ಮನೆಯ ಎಸಿ ಸೇರಿದಂತೆ ಹಲವು ಉಪಕರಣಗಳು ಸುಟ್ಟು ಹೋಗಿವೆ. ಮನೆಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಬಾಗಿಲು ಮುರಿದು ಮನೆಯೊಳಗೆ ಸಿಲುಕಿದ್ದವರನ್ನು ಹೊರ ತೆಗೆದು ರಕ್ಷಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗೂಗಲ್  ಡೂಡಲ್‌ ನಲ್ಲಿ ಕಾಣಿಸಿಕೊಂಡ ನಾಜಿಹಾ ಸಲೀಂ ಯಾರು ?

ಅಪ್ರಾಪ್ತ ಬಾಲಕಿಗೆ ನಂಬರ್ ಕೊಟ್ಟ ಕಂಡೆಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ ಬಾಲಕಿಯ ತಾಯಿ: ವಿಡಿಯೋ ವೈರಲ್

ಇನ್ನೆಷ್ಟು ದಿನ ಇರಲಿದೆ ಅಕಾಲಿಕ ಮಳೆ? | ಹವಾಮಾನ ಇಲಾಖೆ ಹೇಳಿದ್ದೇನು?

ಯಾವ ಅಪರಾಧಕ್ಕಾಗಿ ಬೆದರಿಕೆ ಹಾಕುತ್ತಿದ್ದೀರಿ?: ಶಾಸಕ ರಘುಪತಿ ಭಟ್ ಗೆ ಹಿಜಾಬ್ ಪರ ವಿದ್ಯಾರ್ಥಿನಿ ಪ್ರಶ್ನೆ

ಯಾವ ಅಪರಾಧಕ್ಕಾಗಿ ಬೆದರಿಕೆ ಹಾಕುತ್ತಿದ್ದೀರಿ?: ಶಾಸಕ ರಘುಪತಿ ಭಟ್ ಗೆ ಹಿಜಾಬ್ ಪರ ವಿದ್ಯಾರ್ಥಿನಿ ಪ್ರಶ್ನೆ

ಇತ್ತೀಚಿನ ಸುದ್ದಿ