ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಅಮೆರಿಕ, ತುರ್ತುಪರಿಸ್ಥಿತಿ ಘೋಷಣೆ !
ನೈಋತ್ಯ ಯುನೈಟೆಡ್ ಸ್ಟೇಟ್ ನಲ್ಲಿ ಬಲವಾದ ಗಾಳಿ ಮತ್ತು ಕಾಡ್ಗಿಚ್ಚಿನಿಂದ ವ್ಯಾಪಕ ಹಾನಿ ಉಂಟಾಗಿದ್ದು ಉತ್ತರ ಅರಿಝೋನಾ ಮತ್ತು ನ್ಯೂ ಮೆಕ್ಸಿಕೋದ ಹಲವಾರು ಹಳ್ಳಿಗಳಲ್ಲಿ ಅನೇಕ ಮನೆಗಳು ಸುಟ್ಟು ಕರಕಲಾಗಿದೆ..
ಜ್ವಾಲೆಯು ಒಣ ಕಾಡುಗಳು ಮತ್ತು ಹುಲ್ಲುಗಾವಲು ಪ್ರದೇಶತಗಳಿಗೆ ವ್ಯಾಪಿಸಿದ್ದರಿಂದ ಬೆಂಕಿಯು ಹೆಚ್ಚು ಶಕ್ತಿ ಪಡೆದುಕೊಂಡಿತು. ಬೆಟ್ಟದ ತಪ್ಪಲಿನ ಗ್ರಾಮಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಇದಲ್ಲದೆ ನೈಋತ್ಯ ಯುನೈಟೆಡ್ ಸ್ಟೇಟ್ ನಲ್ಲಿ ಕಾಡ್ಗಿಚ್ಚು ತೀವ್ರಗೊಳ್ಳುತ್ತಿದೆ.
ಕಾಳ್‌ಫಾಕ್ಸ್, ಲಿಂಕನ್, ಸ್ಯಾನ್ ಮಿಗುಯೆಲ್ ಮತ್ತು ವೆಲೆನ್ಸಿಯಾದಲ್ಲಿ ಕಾಳ್ಗಿಚ್ಚು ತೀವ್ರಗೊಳ್ಳುತ್ತಿದ್ದಂತೆ ಗವರ್ನರ್ ಲುಜನ್ ಗ್ರಿಶಮ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.ಹವಾಮಾನದಲ್ಲಿ ಉಂಟಾದಬದಲಾವಣೆಯು ಕಾಡ್ಗಿಚ್ಚಿಗೆ ಒಂದು ಕಾರಣವಾಗಿರಬಹುದು ಎಂದುವಿಜ್ಞಾನಿಗಳ ಅಭಿಪ್ರಾಯಪಟ್ಟಿದ್ದಾರೆ.
ನ್ಯೂ ಮೆಕ್ಸಿಕೋ ಜೊತೆಗೆ, ನೆರೆಯ ಅರಿಝೋನಾದಲ್ಲಿಯು ಕಾಡ್ಗಿಚ್ಚುಗಳು ಉಲ್ಬಣಗೊಳ್ಳುತ್ತಿದೆ.ನ್ಯೂ ಮೆಕ್ಸಿಕೋದ ಲಾಸ್ ವಗಾಸ್ ನ ವಾಯುವ್ಯಕ್ಕೆ ಎರಡು ಕಾಡ್ಗಿಚ್ಚುಗಳು ಒಂದುಗೂಡಿ ಗಂಟೆಗೆ 121 ಕಿಲೋಮೀಟರ್ ವೇಗದ ಗಾಳಿಯ ಜೊತೆಗೆ 24 ಕಿಲೋಮೀಟರ್ ಅರಣ್ಯದ ಒಳಗೆ ನುಗ್ಗಿ 200 ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಗಾಹುತಿಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಪ್ರದೇಶವು ಪ್ರಸ್ತುತ US ನಲ್ಲಿ ಅತಿ ದೊಡ್ಡ ಕಾಡ್ಗಿಚ್ಚು ಉಂಟಾಗಿರುವ ಪ್ರದೇಶವಾಗಿದೆ. ಈವಾಗ ನ್ಯೂ ಮೆಕ್ಸಿಕೋದಲ್ಲಿ ಆರು ಮತ್ತು ಅರಿಝೋನಾದಲ್ಲಿ ಮೂರು ಸ್ಥಳಗಳಲ್ಲಿ ಬೆಂಕಿ ಉರಿಯುತ್ತಿದ್ದು ಒಟ್ಟು 258 ಚ.ಕಿ.ಮೀ ಅರಣ್ಯ ಸುಟ್ಟು ಕರಕಲಾಗಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು]
ಪ್ರೆಶರ್ ಕುಕ್ಕರ್ ಸ್ಫೋಟ: ಯುವಕ ದಾರುಣ ಸಾವು
ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲೇ ಸಾವು
ಮಹತ್ವ ಕಳೆದುಕೊಂಡ ನಿಷೇಧ ಅಭಿಯಾನಗಳು: ಕೆಲವರ ಪ್ರಚಾರಕ್ಕಾಗಿ ನಡೆಯಿತೇ ನಿಷೇಧ ಅಭಿಯಾನ?
ಅಕ್ರಮ ತೈಲ ಸಂಸ್ಕರಣಾಗಾರ ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಬಿಎಸ್ ವೈ ಹೇಳಿದ್ದೇನು?