ಹುಟ್ಟುಹಬ್ಬಕ್ಕೆ ಪ್ರೇಯಸಿಯನ್ನು ಕರೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯಕರ - Mahanayaka
10:08 AM Thursday 12 - December 2024

ಹುಟ್ಟುಹಬ್ಬಕ್ಕೆ ಪ್ರೇಯಸಿಯನ್ನು ಕರೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯಕರ

palakad
25/04/2022

ಪಾಲಕ್ಕಾಡ್ : ಯುವಕನೊಬ್ಬ ಬಾಲಕಿಯನ್ನು ತನ್ನ ಹುಟ್ಟುಹಬ್ಬ ಎಂದು ಹೇಳಿ ಮನೆಗೆ ಕರೆಸಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ  ಪಾಲಕ್ಕಾಡ್ ಎಂಬಲ್ಲಿ ನಡೆದಿದೆ.ಘಟನೆಯಲ್ಲಿ ಯುವಕ ಮತ್ತು ಬಾಲಕಿ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಪಾಲಕ್ಕಾಡ್‌ನ ಕೊಲ್ಲಂಕೋಡ್‌  ಧನ್ಯಾ (17) ಮತ್ತು ಬಾಲಸುಬ್ರಮಣ್ಯಂ (26) ಎಂದು ಗುರುತಿಸಲಾಗಿದೆ.  ಧನ್ಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಳೆ . ಇವರಿಬ್ಬರು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು.

ಸುಬ್ರಮಣ್ಯಂ ಅವರ ತಾಯಿ ಪ್ರಕಾರ, ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಐದು ವರ್ಷಗಳ ನಂತರ ಮದುವೆಯಾಗಲು ಮನೆಯವರು  ಒಪ್ಪಿಕೊಂಡಿದ್ದರು. ಆದರೂ ಅವರು ಯಾಕೆ ಹೀಗೆ ಮಾಡಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಸುಬ್ರಮಣ್ಯಂರವರ ತಾಯಿ ಹೇಳುತ್ತಾರೆ.

ಬಾಲಕಿಯು ಯುವಕನ  ಕೋಣೆಗೆ  ಬರುತ್ತಿದ್ದಂತೆ ಬಾಲಸುಬ್ರಮಣ್ಯಂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಈ ವೇಳೆ ಬಾಲಸುಬ್ರಮಣ್ಯಂ ಅವರ ತಾಯಿ ಮತ್ತು ತಂಗಿ ಮನೆಯಲ್ಲಿದ್ದು ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು ಇಬ್ಬರು ಕೋಣೆಯಿಂದ  ಹೊರ ಬರುತ್ತಿರುವುದನ್ನು ಕಂಡು ತಾಯಿ ಮತ್ತು ಸಹೋದರಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳೀಯರು ಗಾಯಗೊಂಡ ಯುವಕ ಹಾಗು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಪಾಲಕ್ಕಾಡ್ ನಿಂದ ಕೊಚ್ಚಿಗೆ ಕರೆತರಲಾಗಿತ್ತು.ಆದರೆ ಗಂಬೀರವಾಗಿ ಗಾಯಗಳಾಗಿದ್ದ ಪರಿಣಾಮ ಯುವಕ ಮತ್ತು ಬಾಲಕಿ ಸಾವನ್ನಪ್ಪಿದ್ದಾರೆ.

ಬಾಲಕಿಯ ಹೇಳಿಕೆಯಿಂದ ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದನ್ನು ನಿರ್ಧರಿಸಲು ಮಾತ್ರ ಸಾಧ್ಯ ಎಂದು ಪೊಲೀಸರು ಆರಂಭದಲ್ಲಿ ಹೇಳಿದ್ದು, ಆದರೆ ಇಬ್ಬರು ಮೃತರಾದ ಕಾರಣ ಅವರ ಕೊನೆಯ ಫೋನ್ ಕರೆಗಳ ಮೂಲಕ  ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಪೋಲಿಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬುಲ್ಡೋಜರ್ ನಿಂದ ಎಟಿಎಂ ಧ್ವಂಸಗೊಳಿಸಿ ಹಣದೋಚಿದ ಕಳ್ಳರು:  ಕಳ್ಳರಿಗೆ ಮಾದರಿಯಾಯ್ತೆ ಬುಲ್ಡೋಜರ್ ಕಾರ್ಯಾಚರಣೆ!

ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ಇಬ್ಬರು ದುರ್ಮರಣ

ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಅಮೆರಿಕ, ತುರ್ತುಪರಿಸ್ಥಿತಿ ಘೋಷಣೆ !

ಪ್ರೆಶರ್ ಕುಕ್ಕರ್ ಸ್ಫೋಟ: ಯುವಕ ದಾರುಣ ಸಾವು

ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲೇ ಸಾವು

 

ಇತ್ತೀಚಿನ ಸುದ್ದಿ