ಕಾರಿನ ಸೈಲೆನ್ಸರ್ ನಲ್ಲಿ ಕಾಣಿಸಿಕೊಂಡ ಹೊಗೆ: ಕಾರಿನಿಂದ ಇಳಿದರೂ ಹೋಯ್ತು ಪ್ರಾಣ!
ಕಾರ್ಕಳ: ಕಾರಿನ ಸೈಲೆನ್ಸರ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಗಾಬರಿಯಾಗಿ ಕಾರಿನಿಂದ ಇಳಿದವರು ಕೆಲವೇ ಕ್ಷಣಗಳಲ್ಲಿ ದುರಂತಕ್ಕೀಡಾದ ಘಟನೆ ನಗರದ ಪುಲ್ಕೇರಿ-ಬಜಗೋಳಿ ರಾಷ್ಟ್ರೀಯ ಹೆದ್ದಾರಿಯ ಕರಿಯಕಲ್ಲು ಸ್ಮಶಾನ ಮುಂಭಾಗದಲ್ಲಿ ನಡೆದಿದೆ.
39 ವರ್ಷ ವಯಸ್ಸಿನ ಗಿರೀಶ್ ಛಲವಾದಿ ಮೃತಪಟ್ಟವರು ಎಂದು ತಿಳಿದು ಬಂದಿದೆ. ಬಾವಿ ತೋಡುವ ಕೆಲಸ ನಿರ್ವಹಿಸುತ್ತಿದ್ದ ಅವರು ಟಾಟಾ ಇಡಿಗೋ ಕಾರಿನಲ್ಲಿ ದುರ್ಗಪೊಪ, ಕೃಷ್ಣ, ಬಸಪ್ಪ ಎಂಬವರೊಂದಿಗೆ ಜೋಡುರಸ್ತೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಚಲಿಸುತ್ತಿದ್ದ ವಾಹನದ ಸೈಲೆನ್ಸರ್ ನಿಂದ ದಟ್ಟ ಹೊಗೆ ಹೊರ ಉಗುಳುತ್ತಿತ್ತು. ಇದರಿಂದ ಗಾಬರಿಗೊಂಡು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಚಾಲಕ ಗಿರೀಶ್ ಹಾಗೂ ಕೃಷ್ಣ ಎಂಬವರು ಕಾರಿನಿಂದ ಹೊರಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದರು.
ಅದೇ ವೇಳೆಗೆ ಕಾರ್ಕಳ ಪುಲ್ಕೇರಿ ಕಡೆಯಿಂದ ಅತೀ ವೇಗವಾಗಿ ಬರುತ್ತಿದ್ದ ಬಸ್ಸೊಂದು ರಸ್ತೆಯ ಬದಿ ನಿಂತುಕೊಂಡಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಅತಘಾತದ ತೀವ್ರತೆಗೆ ಕಾರಿನ ಹೊರಭಾಗ ರಸ್ತೆಯಲ್ಲಿ ನಿಂತುಕೊಂಡಿದ್ದ ಗಿರೀಶ್, ಕೃಷ್ಣ ಎಂಬವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅದಾಗಲೇ ಗಿರೀಶ್ ಸಾವನೊಪ್ಪಿರುವ ಬಗ್ಗೆ ಅಲ್ಲಿನ ವೈದ್ಯರು ದೃಢ ಪಡಿಸಿದ್ದಾರೆ. ಕಾರು ಜಖಂ ಗೊಂಡಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಾಸ್ಕ್ ಕಡ್ಡಾಯಗೊಳಿಸಿದ ಸರ್ಕಾರ: ಮಾಸ್ಕ್ ಧರಿಸದಿದ್ರೆ ದಂಡ ಹಾಕ್ತಾರಾ?
ಸಾಲಗಾರರ ಹೆಸರು ವಾಟ್ಸಾಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ
ಬುಲ್ಡೋಜರ್ ನಿಂದ ಎಟಿಎಂ ಧ್ವಂಸಗೊಳಿಸಿ ಹಣದೋಚಿದ ಕಳ್ಳರು: ಕಳ್ಳರಿಗೆ ಮಾದರಿಯಾಯ್ತೆ ಬುಲ್ಡೋಜರ್ ಕಾರ್ಯಾಚರಣೆ!
ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಅಮೆರಿಕ, ತುರ್ತುಪರಿಸ್ಥಿತಿ ಘೋಷಣೆ !