ಹಿಮದಲ್ಲಿ ಸಿಲುಕಿದ ಯುವತಿ: ಆರು ದಿನ ಮೊಸರು ಮತ್ತು ಐಸ್ ತಿಂದು ಬದುಕಿದಳು! - Mahanayaka
1:29 PM Thursday 12 - December 2024

ಹಿಮದಲ್ಲಿ ಸಿಲುಕಿದ ಯುವತಿ: ಆರು ದಿನ ಮೊಸರು ಮತ್ತು ಐಸ್ ತಿಂದು ಬದುಕಿದಳು!

shina
26/04/2022

ಆರು ದಿನ ಯುವತಿಯೊಬ್ಬಳು ಮೊಸರು ಮತ್ತು ಐಸ್ ತಿಂದು ಬದುಕಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು ಯುವತಿಯನ್ನು 52 ರ ಹರೆಯದ ಶೀನಾ ಗುಲ್ಲೆಟ್ಟೆ  ಎಂದು ಗುರುತಿಸಲಾಗಿದೆ.

ಈಕೆ ಹೆದ್ದಾರಿ 44 ರಿಂದ ತಮ್ಮ ತವರೂರು ಲಿಟಲ್ ವ್ಯಾಲಿಗೆ ಹೋಗುವ ಮಾರ್ಗದಲ್ಲಿ ಹಿಮಕುಸಿತ ಸಂಭವಿಸಿದ್ದು ಈ ಸಂದರ್ಭದಲ್ಲಿ ಈಕೆಯ ಸ್ನೇಹಿತ ಜಸ್ಟಿನ್ ಹೊನಿಚ್ ಕೂಡ ಜೊತೆಗಿದ್ದರು. ಕಾರು ಹಿಮಕುಸಿತದಲ್ಲಿ ಸಿಲುಕಿದ ಬಳಿಕ ಇಬ್ಬರೂ ಕಾರಿನಲ್ಲೇ ರಾತ್ರಿ ಕಳೆದಿದ್ದಾರೆ.  ಮರುದಿನ ಬೆಳಿಗ್ಗೆ ಕಾರು ಓಡಿಸಲು ಪ್ರಯತ್ನಿಸಿದಾಗ, ಬ್ಯಾಟರಿ ಹಾಳಾಗಿದ್ದು, ಆಮೇಲೆ  ಇಬ್ಬರು ಕಾರಿನಿಂದ ಇಳಿದು ನಡೆಯಲು ನಿರ್ಧರಿಸಿದ್ದಾರೆ.  ಆದರೆ ಸ್ವಲ್ಪ ದೂರದಲ್ಲಿ ಶೀನಾಳ ಬೂಟು ಹಾಳಾಗಿದ್ದು  ಶೀನಾ ನಡೆಯಲಾರದೆ ಹಿಂದೆ ಬಿದ್ದಳು.  ಈ ಹೊತ್ತಿಗೆ ಜಸ್ಟಿನ್ ಬಹಳ ದೂರ ನಡೆದಿದ್ದ. ಮುಂದೆ  ಶೀನನನ್ನು ಹುಡುಕಿಕೊಂಡು ಹೋಗಲೂ ಆಗದಷ್ಟು ಹಿಮವು ದಟ್ಟವಾಗಿತ್ತು. ಅಷ್ಟೊತ್ತಿಗಾಗಲೇ ಶೀನಾ ನಡೆಯಲು ಸಾಧ್ಯವಾಗದೆ  ಮತ್ತೆ ಕಾರಿನಲ್ಲಿ ಬಂದು ಆಶ್ರಯ ಪಡೆದರು.

ಜಸ್ಟಿನ್  ಚಳಿಯಿಂದ ರಕ್ಷಣೆ ಪಡೆಯಲು ರಾತ್ರಿ ವೇಳೆಯಲ್ಲಿ ಬೆಂಕಿ ಹೆಚ್ಚಿ ಕಾಲ  ಕಳೆದರು. ಮರುದಿನ  ಹಿಮಭರಿತ ರಸ್ತೆಯಿಂದ ಕಲ್ಲುಗಳು ತುಂಬಿದ ರಸ್ತೆಗೆ ಬಂದು ಎರಡನೇ ದಿನ ಅಲ್ಲಿಯೇ ಊಟ ರಾತ್ರಿ ಕಳೆದ ನಂತರ ಜಸ್ಟಿನ್ ಮೂರನೇ ದಿನ ಹೆದ್ದಾರಿಗೆ ಬಂದು  ಅಲ್ಲಿಂದ ಸಮೀಪದ ಊರಿಗೆ ವಾಹನದಲ್ಲಿ ತೆರಳಿ  ತಕ್ಷಣ ಪೊಲೀಸ್ ಠಾಣೆಯಲ್ಲಿ ಶೀನಾ ನಾಪತ್ತೆಯಾದ ವಿಷಯ ತಿಳಿಸಿದ್ದಾನೆ.

ಜಸ್ಟಿನ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹುಡುಕಾಟ ಆರಂಭಿಸಿದಾದರು  ನಿಖರವಾದ ಸ್ಥಳ ಮತ್ತು ಹಿಮಪಾತದಿಂದಾಗಿ ಶೀನಾವನ್ನು ಹುಡುಕಲು ಮೂರು ದಿನಗಳ ಕಾಲಾವಕಾಶ ತೆಗೆದುಕೊಂಡರು.  ಶೀನಾ ಹಿಮದಲ್ಲಿ ಸಿಕ್ಕಿ ಹಾಕಿಕೊಂಡಿದು ಆರು ದಿನಗಳು ಈ ಸಮಯದಲ್ಲಿ ಕೈಯಲ್ಲಿದ್ದ ಮೊಸರು ಮತ್ತು ಬಾಯಾರಿಕೆ ನೀಗಿಸಲು ನೀರಿನ ಬದಲು ಹಿಮ ಕುಡಿದು ಜೀವ ಉಳಿಸಿದಳು.ಪತ್ತೆಯಾದ ನಂತರ ಶೀನಾ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಟಿಟಿ ಗೆ ‘ದಿ ಕಾಶ್ಮೀರ್ ಫೈಲ್ಸ್’:  ZEE 5 ಮೂಲಕ ಬಿಡುಗಡೆ

ಸ್ವಲ್ಪದರಲ್ಲೇ ಬಚಾವ್ ಆದ ಸಿಎಂ ಬೊಮ್ಮಾಯಿ: ಗೋಪೂಜೆ ವೇಳೆ ಮುನ್ನುಗ್ಗಿದ ಎತ್ತು!

ದಿವ್ಯಾ ಹಾಗರಗಿ ಜೊತೆ ಡಿಕೆಶಿ ಇರುವ ಫೋಟೋ ಟ್ವೀಟ್ ಮಾಡಿದ ಬಿಜೆಪಿ

ತಮ್ಮದೇ ಸರ್ಕಾರದ ಆದೇಶಕ್ಕೆ ಬೆಲೆ ಕೊಡದ ಬಿಜೆಪಿ ಸಚಿವರು, ಮುಖಂಡರು

ಸಿದ್ದರಾಮಯ್ಯನಷ್ಟು ಅಸಮರ್ಥರು ನಮ್ಮ ಗೃಹ ಸಚಿವರಲ್ಲ: ನಳಿನ್ ಕುಮಾರ್ ಕಟೀಲ್

 

ಇತ್ತೀಚಿನ ಸುದ್ದಿ