ಮೂರನೇ ವಿಶ್ವ ಯುದ್ದದ ಎಚ್ಚರಿಕೆ ನೀಡಿದ ರಷ್ಯಾ
ಉಕ್ರೇನ್ ರಷ್ಯಾ ಯುದ್ದ ನಡೆಯುತ್ತಿದ್ದು ಉಕ್ರೇನ್ ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಇತರ ದೇಶಗಳ ವಿರುದ್ದ ರಷ್ಯಾ ಕಿಡಿಕಾರಿದ್ದು ಮೂರನೇ ವಿಶ್ವ ಯುದ್ದವನ್ನು ಪ್ರಾರಂಭಿಸುವ ಬಗ್ಗೆ ಎಚ್ಚರಿಕೆ ನೀಡಿದೆ.
ಸಂಘರ್ಷ ಪೀಡಿತ ಉಕ್ರೇನ್ ರಷ್ಯಾದೊಂದಿಗೆ ಹೋರಾಟ ನಡೆಸಲು ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕುರಿತು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಮಂಗಳವಾರ (ಇಂದು) ಸಭೆ ನಡೆಯಲಿದೆ. ಈ ಸಭೆಗೂ ಮುನ್ನ ರಷ್ಯಾ ದೊಡ್ಡ ಮಟ್ಟದಲ್ಲಿ ಎಚ್ಚರಿಕೆಯನ್ನು ನೀಡಿದೆ.
ಈ ಬಗ್ಗೆ ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗಾಯ್ ಲಾವ್ರೋಸ್, ಉಕ್ರೇನ್ ಗೆ ಪಾಶ್ಚಾತ್ಯ ದೇಶಗಳ ಬೆಂಬಲದ ಕಾರಣದಿಂದಾಗಿಯೇ ಶಾಂತಿ ಮಾತುಕತೆಗಳು ಮುರಿದು ಬೀಳುತ್ತಿದೆ. ಉಕ್ರೇನ್ ರಷ್ಯಾ ಸೇನೆಯ ವಿರುದ್ಧ ಹೋರಾಡಲು ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದನ್ನು ರಷ್ಯಾ ಗಮನಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವೆರೆದರೆ ವಿಶ್ವದಲ್ಲಿ ಮೂರನೇ ಮಹಾಯುದ್ಧ ಸನ್ನಿಹಿತಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಅಗತ್ಯ ಮಿಲಿಟರಿ ನೆರವನ್ನು ಕೇಳುತ್ತಿದ್ದಾರೆ. ಫಿರಂಗಿ, ಫೈಟರ್ ಜೆಟ್‌ಗಳು ಸೇರಿದಂತೆ ತಮಗೆ ಅತ್ಯಗತ್ಯ ಮಿಲಿಟರಿ ನೆರವು ಸಿಕ್ಕರೆ ಉಕ್ರೇನ್ ಪಡೆಗಳು ರಷ್ಯಾವನ್ನು ಮಣಿಸಲಿವೆ ಎಂದು ಅವರು ಹೇಳಿದ್ದಾರೆ.
ಅಮೆರಿಕವು ಕಳೆದ ವಾರ ಉಕ್ರೇನ್ ಗೆ 53 ಸಾವಿರ ಕೋಟಿ ಮಿಲಿಟರಿ ನೆರವು ನೀಡುವ ಭರವಸೆ ನೀಡಿದೆ. ಉಕ್ರೇನ್ ಗೆ ಹೆಚ್ಚಿನ ಶಾಸ್ತ್ರಾಸ್ತ್ರಗಳನ್ನು ಪೂರೈಸುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಇಂದು ಅಮೆರಿಕ ನೇತೃತ್ವದಲ್ಲಿ 40 ಕ್ಕೂ ಹೆಚ್ಚಿನ ರಾಷ್ಟ್ರಗಳು ಜರ್ಮನಿಯಲ್ಲಿ ಭದ್ರತಾ ಶೃಂಗಸಭೆ ನಡೆಸಲಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿಮದಲ್ಲಿ ಸಿಲುಕಿದ ಯುವತಿ: ಆರು ದಿನ ಮೊಸರು ಮತ್ತು ಐಸ್ ತಿಂದು ಬದುಕಿದಳು!
ಒಟಿಟಿ ಗೆ ‘ದಿ ಕಾಶ್ಮೀರ್ ಫೈಲ್ಸ್’: ZEE 5 ಮೂಲಕ ಬಿಡುಗಡೆ
ಸ್ವಲ್ಪದರಲ್ಲೇ ಬಚಾವ್ ಆದ ಸಿಎಂ ಬೊಮ್ಮಾಯಿ: ಗೋಪೂಜೆ ವೇಳೆ ಮುನ್ನುಗ್ಗಿದ ಎತ್ತು!
ದಿವ್ಯಾ ಹಾಗರಗಿ ಜೊತೆ ಡಿಕೆಶಿ ಇರುವ ಫೋಟೋ ಟ್ವೀಟ್ ಮಾಡಿದ ಬಿಜೆಪಿ
ತಮ್ಮದೇ ಸರ್ಕಾರದ ಆದೇಶಕ್ಕೆ ಬೆಲೆ ಕೊಡದ ಬಿಜೆಪಿ ಸಚಿವರು, ಮುಖಂಡರು