ತಕರಾರು ಯಾಕೆ ನೀವೇ ಸಿಎಂ ಆಗಿ ಬಿಡಿ ಎಂದ ಯತ್ನಾಳ್: ನಕ್ಕ ಬಸವರಾಜ್ ಬೊಮ್ಮಾಯಿ - Mahanayaka
10:20 AM Thursday 12 - December 2024

ತಕರಾರು ಯಾಕೆ ನೀವೇ ಸಿಎಂ ಆಗಿ ಬಿಡಿ ಎಂದ ಯತ್ನಾಳ್: ನಕ್ಕ ಬಸವರಾಜ್ ಬೊಮ್ಮಾಯಿ

yathnal bommai
26/04/2022

ವಿಜಯಪುರ: ನಾನೇ ಸಿಎಂ ಎಂದು ಹೇಳುತ್ತಿದ್ದ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂದು ಸಿಎಂ ಬೊಮ್ಮಾಯಿ ಅವರ ವಿಜಯಪುರ ಪ್ರವಾಸದ ಸಂದರ್ಭದಲ್ಲಿ, ಸಿಎಂ ಆಗುವ ಕನಸಿನಿಂದ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೆ ವೇದಿಕೆ ಹಂಚಿಕೊಂಡ ಯತ್ನಾಳ್, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ನಾವು ಏನೂ ಆಗುವುದಿಲ್ಲ ಎಂದಾದ ಮೇಲೆ ತಕರಾರು ಮಾಡಿ ಏನು ಪ್ರಯೋಜನ? ಎಂದು ಸಿಎಂ ಆಗದಿರುವ ಬಗ್ಗೆ ನಿರಾಸೆ ವ್ಯಕ್ತಪಡಿಸಿದರು.

ಬೊಮ್ಮಾಯಿಯವರೇ ಸಿಎಂ ಆಗಲು ನಮ್ಮ ತಕರಾರು ಇಲ್ಲ. ಈ ರೀತಿ ಮಾಡುವ ಜನರು ನಾವಲ್ಲ. ಮುಂದಿನ ಮುಖ್ಯಮಂತ್ರಿಯೂ ನೀವೇ ಆಗಿ ಎಂದು ಹೇಳಿದರು. ನಾವು ಏನೂ ಆಗುವುದಿಲ್ಲ ಎಂದಾದ ಮೇಲೆ ತಕರಾರು ಮಾಡಿ ಏನು ಪ್ರಯೋಜನ ಎಂದರು.

ಯತ್ನಾಳ ಅವರ ಮಾತಿಗೆ ಸಿಎಂ ಬೊಮ್ಮಾಯಿ ನಗುತ್ತಾ, ಯತ್ನಾಳ್ ಗೆ ಕೈಮುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಯತ್ನಾಳ್ ನಾವೇನು ತಕರಾರು ಮಾಡಲ್ಲ. ಮುಂದೆಯೂ ಸಿಎಂ ಆಗಿಬಿಡಿ ಎಂದು ಹೇಳಿದರು.

ಇನ್ನೂ ಇದೇ ವೇದಿಕೆಯಲ್ಲಿ ಮಾತನಾಡಿದ ಯತ್ನಾಳ್, ಬಡವರಿಗೆ ನೀಡಲಾಗುತ್ತಿರುವ ಅನ್ನಭಾಗ್ಯ, ತಾಳಿ ಭಾಗ್ಯ ಯೋಜನೆಯನ್ನು ದರಿದ್ರ ಯೋಜನೆ ಎಂದು ಕರೆದರಲ್ಲದೇ ಈ ಯೋಜನೆಗಳನ್ನು ರದ್ದು ಮಾಡಬೇಕು, ಈ ಯೋಜನೆಗಳು ಜನರನ್ನು ದರಿದ್ರರನ್ನಾಗಿಸುತ್ತದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೂರನೇ ವಿಶ್ವ ಯುದ್ದದ ಎಚ್ಚರಿಕೆ ನೀಡಿದ ರಷ್ಯಾ

66ನೇ ವಯಸ್ಸಿನಲ್ಲಿ ಎರಡನೇ ವಿವಾಹಕ್ಕೆ ಸಿದ್ಧವಾದ ಮಾಜಿ ಕ್ರಿಕೆಟಿಗ!

ಹಿಮದಲ್ಲಿ ಸಿಲುಕಿದ ಯುವತಿ: ಆರು ದಿನ ಮೊಸರು ಮತ್ತು ಐಸ್ ತಿಂದು ಬದುಕಿದಳು!

ಸ್ವಲ್ಪದರಲ್ಲೇ ಬಚಾವ್ ಆದ ಸಿಎಂ ಬೊಮ್ಮಾಯಿ: ಗೋಪೂಜೆ ವೇಳೆ ಮುನ್ನುಗ್ಗಿದ ಎತ್ತು!

ತಮ್ಮದೇ ಸರ್ಕಾರದ ಆದೇಶಕ್ಕೆ ಬೆಲೆ ಕೊಡದ ಬಿಜೆಪಿ ಸಚಿವರು, ಮುಖಂಡರು

ಇತ್ತೀಚಿನ ಸುದ್ದಿ