ವೈಲೆಂಟ್ ಆಗಿದ್ದ ಅಜಯ್ ದೇವಗನ್ ರನ್ನು ಸೈಲೆಂಟ್ ಮಾಡಿದ ಕಿಚ್ಚ ಸುದೀಪ್! - Mahanayaka
1:17 PM Thursday 12 - December 2024

ವೈಲೆಂಟ್ ಆಗಿದ್ದ ಅಜಯ್ ದೇವಗನ್ ರನ್ನು ಸೈಲೆಂಟ್ ಮಾಡಿದ ಕಿಚ್ಚ ಸುದೀಪ್!

kicha sudeep ajay devgan
27/04/2022

ಕಿಚ್ಚ ಸುದೀಪ್ ವಿರುದ್ದ ಹರಿಹಾಯ್ದಿದ್ದ ಹಿಂದಿ ನಟ ಅಜಯ್ ದೇವಗನ್ ಇದೀಗ ಕಿಚ್ಚನ ಪ್ರತಿಕ್ರಿಯೆಗೆ ಒಂದೇ ಬಾರಿಗೆ ತನ್ನ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದು, “ಅನುವಾದದಲ್ಲಿ ಏನೋ ತಪ್ಪಾಗಿದೆ” ಎಂದು  ಹೇಳುವ ಮೂಲಕ ಚರ್ಚೆಯಿಂದ ಹಿಂದಕ್ಕೆ ಸರಿದಿದ್ದಾರೆ.

ಸಂದರ್ಶನವೊಂದಲ್ಲಿ ಮಾತನಾಡಿದ್ದ ಸುದೀಪ್, ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ. ನಾವು ದಕ್ಷಿಣದಿಂದ ಬರ್ತೀವಿ ಅಂದ ಮಾತ್ರಕ್ಕೆ ಪ್ಯಾನ್ ಇಂಡಿಯಾ ಅಂತ ಕರೆಯೋಕೆ ಆರಂಭಿಸಿದರು. ಹಿಂದಿ ಚಿತ್ರಗಳನ್ನು ಪ್ಯಾನ್ ಇಂಡಿಯಾ ಅಂತ ಯಾಕೆ ಕರೆಯಲ್ಲ? ದಕ್ಷಿಣ ಭಾರತದ ಭಾಷೆಗಳಿಗೂ ಹಿಂದಿಯವರು ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಆದರೆ, ಅವು ಓಡುತ್ತಿಲ್ಲ. ಆದರೆ ಇಲ್ಲಿಂದ ಡಬ್ ಆಗಿರೋ ಚಿತ್ರ ಅಲ್ಲಿ ಓಡುತ್ತಿವೆ.  ಕೆಜಿಎಫ್, ಪುಷ್ಪಾ ಇವರೆಲ್ಲ ಪ್ರಯತ್ನ ಪಟ್ಟರು ಹೀಗಾಗಿ ಗೆದ್ದರು. ನನಗೆ ಅನ್ನಿಸುವ ಹಾಗೆ ಆ ಪದವನ್ನು ಡಿಲೀಟ್ ಮಾಡಬೇಕು ಎಂದು ಸಂದರ್ಶನದಲ್ಲಿ ಕಿಚ್ಚ ಸುದೀಪ್ ಹೇಳಿದರು.

ಕಿಚ್ಚ ಸುದೀಪ್ ಅವರ ಈ ಹೇಳಿಕೆ ವಿರುದ್ಧ ಏಕಾಏಕಿ ಕಿಡಿಕಾರಿದ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲವಾಗಿದ್ದರೆ, ನಿಮ್ಮ ಮಾತೃ ಭಾಷೆಗಳ ಸಿನಿಮಾಗಳನ್ನು ಹಿಂದಿಗೆ ಏಕೆ ಡಬ್ ಮಾಡಿ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ ಆಗಿದ್ದು, ಇಂದು ಮತ್ತು ಎಂದೆಂದಿಗೂ ಆಗಿರುತ್ತದೆ. ಜನಗಣಮನ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ಹಲೇ ಅಜಯ್ ದೇವಗನ್ ಸರ್, ನಾನು ಆ ಸಾಲನ್ನು ಬೇರೆಯದ್ದೇ ಅರ್ಥದಲ್ಲಿ ಹೇಳಿದ್ದೆ. ಆದರೆ ಅದು ನಿಮಗೆ ಬೇರೆಯೇ ರೀತಿಯಲ್ಲಿ ತಲುಪಿದೆ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ಖುದ್ದಾಗಿ ಭೇಟಿ ಮಾಡಿದಾಗ ಆ ಹೇಳಿಕೆಯ ಬಗ್ಗೆ ವಿವರಿಸುವೆ. ನೋಯಿಸುವ ಉದ್ದೇಶದಿಂದಾಗಲಿ, ಪ್ರಚೋದಿಸುವ ಉದ್ದೇಶದಿಂದಾಗಲಿ,  ಚರ್ಚೆ ಹುಟ್ಟು ಹಾಕಲು ನಾನು ಆ ಹೇಳಿಕೆ ನೀಡಿಲ್ಲ, ನಾನ್ಯಾಕೆ ಆ ರೀತಿ ಮಾಡಲಿ ಎಂದು ಪ್ರಶ್ನಿಸಿದ್ದಾರೆ.

ನಾನು ನಮ್ಮ ದೇಶದ ಪ್ರತಿಯೊಂದು ಭಾಷೆಯನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ಟಾಪಿಕ್ ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ.  ನಾನು ಆ ಸಾಲನ್ನು ಬೇರೆಯದ್ದೇ ಅರ್ಥದಲ್ಲಿ ಹೇಳಿದ್ದೆ. ನಿಮ್ಮ ಮೇಲೆ ಯಾವಾಗಲೂ ನನ್ನಲ್ಲಿ ಪ್ರೀತಿ ಇರುತ್ತದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವ ನಿರೀಕ್ಷೆ ಇದೆ ಎಂದು ಕಿಚ್ಚ ಸುದೀಪ್ ಹೇಳಿದರು.

ಇನ್ನೊಂದು ಮಾತು ಅಜಯ್ ದೇವಗನ್ ಸರ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ಯಾಕೆಂದರೆ, ನಾವು ಪ್ರೀತಿಯಿಂದ ಹಾಗೂ ಗೌರವದಿಂದ ಹಿಂದಿ ಕಲಿತಿದ್ದೇವೆ. ಆದರೆ ನಿಮ್ಮ ಟ್ವೀಟ್ ಗೆ ನನ್ನ ಪ್ರತಿಕ್ರಿಯೆ ಕನ್ನಡದಲ್ಲಿ ಟೈಪ್ ಮಾಡಿದ್ದರೆ. ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಿದ್ದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಕಿಚ್ಚ ಸುದೀಪ್ ನಯವಾಗಿ ತಿರುಗೇಟು ನೀಡಿದರು.

ಕಿಚ್ಚನ ಟ್ವೀಟ್ ನೋಡುತ್ತಿದ್ದಂತೆಯೇ ಅಜಯ್ ದೇವಗನ್ ಸೈಲೆಂಟಾಗಿದ್ದು,  ಹಾಯ್ ಕಿಚ್ಚ ಸುದೀಪ್ ನೀವು ನನ್ನ ಸ್ನೇಹಿತ. ತಪ್ಪು ತಿಳುವಳಿಕೆಯನ್ನು ಸರಿಪಡಿಸಿದ್ದಕ್ಕೆ ಧನ್ಯವಾದಗಳು ಫಿಲ್ಮ್ ಇಂಡಸ್ಟ್ರಿ ಒಂದೇ ಎಂದು ನಾನು ಯಾವಾಗಲೂ ನಂಬಿರುವವನು ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ನಮ್ಮ ಭಾಷೆಯನ್ನು ಇತರರೂ ಗೌರವಿಸಬೇಕು ಎಂದು ಭಾವಿಸುತ್ತೇವೆ. ಅನುವಾದದಲ್ಲಿ ಏನೋ ತಪ್ಪಾಗಿರುವ ಹಾಗಿದೆ ಎಂದು ದೇವಗನ್ ಟ್ವೀಟ್ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ಕಿಚ್ಚನ  ವಿರುದ್ಧ ಅಜಯ್ ದೇವಗನ್   ಕಿಡಿ

ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ :ನಟನ ವಿರುದ್ಧ ಕೇಸ್ 

ನಡು ರಸ್ತೆಯಲ್ಲಿ ಕೈಕೊಟ್ಟ ಇಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಇಟ್ಟ!

ರಥಕ್ಕೆ ವಿದ್ಯುತ್ ತಂತಿ ತಗುಲಿ;  11  ಮಂದಿ ಸಾವು

ನರ್ಸ್ ನ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು!: ತಾಯಿಯ ಕಣ್ಣಮುಂದೆಯೇ ಘಟನೆ

ಇತ್ತೀಚಿನ ಸುದ್ದಿ