ಒಟಿಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ಯದಲ್ಲೇ ಬಿಡುಗಡೆ: ದಿನಾಂಕ ಪ್ರಕಟ
ಯಶ್ ಅಭಿನಯದ ಕೆಜಿಎಫ್ 2 ದೊಡ್ಡ ಸಿನಿಮಾಗಳ ದಾಖಲೆಗಳನ್ನು ಮುರಿಯುವ ಮೂಲಕ ಥಿಯೇಟರ್‌ಗಳಲ್ಲಿ ಮುನ್ನಡೆಯುತ್ತಿದೆ. ಕಳೆದ ತಿಂಗಳು 14 ರಂದು ಚಿತ್ರಮಂದಿರಕ್ಕೆ ಬಂದ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದಾಖಲೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈ ಚಿತ್ರ ಭಾರತದಲ್ಲೇ ಮೊದಲ ದಿನವೇ 134.5 ಕೋಟಿ ಗಳಿಸಿತ್ತು. ತುಂಬಿದ ಥಿಯೇಟರ್ ಗಳಲ್ಲಿ ಪ್ರದರ್ಶನ ಮುಂದುವರೆದಿದ್ದು, ಚಿತ್ರದ ಓಟಿಟಿ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ಮೇ 27 ರಂದು ಅಮೆಜಾನ್ ಪ್ರೈಮ್ ಮೂಲಕ ಸಿನಿಮಾ ಬಿಡುಗಡೆಯಾಗಲಿದೆ. ಪ್ರೈಮ್ ವಿಡಿಯೋದಲ್ಲಿ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಕೋಲಾರದ ಚಿನ್ನದ ಗಣಿ ಹಿನ್ನೆಲೆಯಲ್ಲಿ ರಾಕಿ ಎಂಬ ಭೂಗತ ಲೋಕದ ನಾಯಕನ ಕಥೆಯನ್ನು ಹೇಳಿದೆ.
ಸಂಜಯ್ ದತ್, ಪ್ರಕಾಶ್ ರಾಜ್, ರವೀನಾ ಟಂಡನ್, ಶ್ರೀನಿತಿ ಶೆಟ್ಟಿ, ಮಾಳವಿಕಾ ಅವಿನಾಶ್ ಮತ್ತು ಈಶ್ವರಿ ರಾವ್ ಮುಂತಾದ ದೊಡ್ಡ ತಾರಾಬಳಗವಿದೆ. ಚಿತ್ರದ ಮೊದಲ ಭಾಗವು ಡಿಸೆಂಬರ್ 21, 2018 ರಂದು ಬಿಡುಗಡೆಯಾಯಿತು. ಎರಡೇ ವಾರದಲ್ಲಿ ಚಿತ್ರ 100 ಕೋಟಿ ಕ್ಲಬ್ ತಲುಪಿದೆ. ಬಾಹುಬಲಿ ನಂತರ ಈ ಸಾಧನೆ ಮಾಡಿದ ಎರಡನೇ ಚಿತ್ರ ಕೆಜಿಎಫ್.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವೈಲೆಂಟ್ ಆಗಿದ್ದ ಅಜಯ್ ದೇವಗನ್ ರನ್ನು ಸೈಲೆಂಟ್ ಮಾಡಿದ ಕಿಚ್ಚ ಸುದೀಪ್!
ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ಕಿಚ್ಚನ ವಿರುದ್ಧ ಅಜಯ್ ದೇವಗನ್ ಕಿಡಿ
ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ :ನಟನ ವಿರುದ್ಧ ಕೇಸ್