ಆಟೋರಿಕ್ಷಾ ಸ್ಕೂಟರ್ ಗೆ ಡಿಕ್ಕಿ: ಇಬ್ಬರು ಧರ್ಮಗುರುಗಳಿಗೆ ಗಾಯ - Mahanayaka
1:00 PM Thursday 12 - December 2024

ಆಟೋರಿಕ್ಷಾ ಸ್ಕೂಟರ್ ಗೆ ಡಿಕ್ಕಿ: ಇಬ್ಬರು ಧರ್ಮಗುರುಗಳಿಗೆ ಗಾಯ

kambalabettu
28/04/2022

ಕಂಬಳಬೆಟ್ಟು: ಆಟೋರಿಕ್ಷಾ ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಧರ್ಮಗುರುಗಳು ಗಾಯಗೊಂಡ ಘಟನೆ ಕಂಬಳಬೆಟ್ಟು ಸೇತುವೆ ಬಳಿ  ನಡೆದಿದೆ.

ವಿಟ್ಲದಿಂದ ಕಂಬಳಬೆಟ್ಟು ಕಡೆ ಹೋಗುತ್ತಿದ್ದ ಆಟೊ ರಿಕ್ಷಾ ಪುತ್ತೂರಿನಿಂದ ವಿಟ್ಲಕ್ಕೆ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಅಪಘಾತದಿಂದ ಮಹಮ್ಮದ್ ಯಾಸಿನ್ ಕಾಲಿಗೆ ಗಂಭೀರ ಗಾಯವಾಗಿದ್ದು, ಅಬ್ದುಲ್ ರಹಿಮಾನ್ ಎಂಬವರ ಕೈಗೆ ಗಾಯವಾಗಿದೆ.

ಅಪಘಾತ ನಡೆಸಿ ಪರಾರಿಯಾಗಲು ಯತ್ನಿಸಿದ ಆಟೋ ಚಾಲಕನನ್ನು ಸ್ಥಳೀಯರು ತಡೆದಿದ್ದು, ಗಾಯಾಳುಗಳನ್ನು ಅದೇ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಧಾನಿ ಮಾತನಾಡುತ್ತಿರುವ ವೇಳೆ ಕೇಜ್ರಿವಾಲ್ ಹೀಗಾ ಮಾಡೋದು?: ಬಿಜೆಪಿ ಮುಖಂಡರಿಂದ ಆಕ್ರೋಶ

ಮಲಬಾರ್ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಳಗೆ ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪ್ರೀತಿ ವಿಚಾರದಲ್ಲಿ ಗಲಾಟೆ: ಯುವತಿಗೆ ಆಸಿಡ್ ಎರಚಿದ ಯುವಕ

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ವೈಲೆಂಟ್ ಆಗಿದ್ದ ಅಜಯ್ ದೇವಗನ್ ರನ್ನು ಸೈಲೆಂಟ್ ಮಾಡಿದ ಕಿಚ್ಚ ಸುದೀಪ್!

 

ಇತ್ತೀಚಿನ ಸುದ್ದಿ