ಕುಡಿದು ಪ್ರಜ್ಞೆ ಇಲ್ಲದೇ ಬಿದ್ದ ವರ: ತನ್ನ ಸಂಬಂಧಿಯನ್ನೇ ಮದುವೆಯಾದ ವಧು!

ಮಹಾರಾಷ್ಟ್ರ: ವರನೊಬ್ಬ ತನ್ನ ಸ್ನೇಹಿತರ ಜೊತೆ ಕುಡಿದು ಚಿತ್ತಾಗಿ ಮುಹೂರ್ತಕ್ಕೆ ಸರಿಯಾಗಿ ಮಂಟಪಕ್ಕೆ ತಲುಪದ ಕಾರಣ ವಧುವೊಬ್ಬಳು ತನ್ನ ಸಂಬಂಧಿಯನ್ನು ವರಿಸಿದ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.
ಏಪ್ರಿಲ್ 22ರಂದು ವಿವಾಹ ನಿಶ್ಚಯವಾಗಿತ್ತು. ಸಂಜೆ ನಾಲ್ಕು ಗಂಟೆಗೆ ವಿವಾಹ ಮುಹೂರ್ತ ಫಿಕ್ಸ್ ಆಗಿತ್ತು. ಅತ್ತ ವರ ತನ್ನ ಸ್ನೇಹಿತರ ಜೊತೆಗೆ ಕುಡಿದು ಚಿತ್ತಾಗಿ ಡಾನ್ಸ್ ಮಾಡುತ್ತಲೇ ಕಾಲು ಕಳೆದಿದ್ದು, ಕೊನೆಗೆ ಕುಡಿತದ ಮತ್ತಿನಲ್ಲಿ ಪ್ರಜ್ಞೆ ಇಲ್ಲದೇ ಬಿದ್ದುಕೊಂಡಿದ್ದಾನೆ.
ಇತ್ತ ವಧುವಿನ ಕಡೆಯವರು 4ಗಂಟೆವರೆಗೂ ಕಾದಿದ್ದಾರೆ. ಆದರೆ ವರನ ಸುಳಿವೇ ಇರಲಿಲ್ಲ. ಕೊನೆಗೆ ಕರೆ ಮಾಡಿ ವಿಚಾರಿಸಿದಾಗ ವರ ಕುಡಿದು ಪ್ರಜ್ಞೆ ಇಲ್ಲದವರಂತೆ ಬಿದ್ದಿದ್ದಾನೆ ಎನ್ನುವ ಸುದ್ದಿ ತಿಳಿಯಿತು.
ವರನ ಕುಡಿತದ ಸ್ಟೋರಿ ಕೇಳಿದಾಗಲೇ ಮಗಳ ಭವಿಷ್ಯದ ಬಗ್ಗೆ ಪೋಷಕರಿಗೆ ಚಿಂತೆಯಾಗಿ ಬಿಟ್ಟಿದೆ. ಇದೇ ವೇಳೆ ಅವರು, ತಮ್ಮ ಕುಟುಂಬಸ್ಥರ ಜೊತೆಗೆ ಚರ್ಚೆ ಮಾಡಿ ಅದೇ ಮುಹೂರ್ತದಲ್ಲಿ ತಮ್ಮ ಸಂಬಂಧಿಕನೊಬ್ಬರಿಗೆ ಮಗಳನ್ನು ವಿವಾಹ ಮಾಡಿಕೊಟ್ಟಿದ್ದಾರೆ.
ಅತ್ತ ಕುಡಿದು ಚಿತ್ತಾಗಿ ಬಿದ್ದಿದ್ದ ಮೊದಲ ವರನಿಗೆ ಪ್ರಜ್ಞೆ ಮರುಕಳಿಸಿದ್ದು, ವಿವಾಹದ ನೆನಪಾಗಿ ಸಂಬಂಧಿಕರನ್ನು ಕರೆದುಕೊಂಡು ಬಂದಿದ್ದಾನೆ. ಆ ವೇಳೆಗಾಗಲೇ ರಾತ್ರಿ 8 ಗಂಟೆಯಾಗಿತ್ತು. ಆದರೆ ವಧು ಬೇರೊಬ್ಬನ ಕೈ ಹಿಡಿದಿದ್ದಾಳೆ ಎನ್ನುವುದು ತಿಳಿಯುತ್ತಿದ್ದಂತೆಯೇ ವಾಪಸ್ ತೆರಳಿದ್ದಾನೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
18 ದಿನಗಳ ಕಣ್ಣಾಮುಚ್ಚಾಲೆ ಬಳಿಕ ಸಿಐಡಿಗೆ ಸಿಕ್ಕಿ ಬಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ
ಮಂಗಳೂರು: ಹಾಡಹಗಲೇ ರೌಡಿಶೀಟರ್ ನ ಭೀಕರ ಹತ್ಯೆ
ಹೃದಯಾಘಾತಕ್ಕೂ ಮೊದಲು ಕಂಡು ಬರುವ ಮುನ್ಸೂಚನೆಗಳೇನು?