ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!

ಮಥುರಾ:ವಿವಾಹ ನಡೆಯುತಿದ್ದ ಸಂದರ್ಭದಲ್ಲಿಯೇ ವಧುವನ್ನು ವಿವಾಹ ಮಂಟಪದಲ್ಲಿಯೇ ಆಕೆಯ ಪ್ರಿಯಕರ ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಮಥುರಾದ ನೌಜ್ ಹೀಲ್ ಪ್ರದೇಶದ ಮುಬಾರಿಕ್ ಪುರ್ ಗ್ರಾಮದಲ್ಲಿ ಶುಕ್ರವಾರ(ಏಪ್ರಿಲ್ 29) ನಡೆದಿದೆ. ಮೃತ ವಧುವನ್ನು ಕಾಜಲ್ ಎಂದು ಗುರುತಿಸಲಾಗಿದೆ.
ವಧು ವರರು ಹೂವಿನ ಹಾರ ಬದಲಿಸಿದ ನಂತರ ಮದುಮಗಳು ವಿಶ್ರಾಂತಿ ಕೋಣೆಗೆ ತೆರಳಿದ ಸಂದರ್ಭದಲ್ಲಿ “ಅಪರಿಚಿತ ಯುವಕನೊಬ್ಬ ಬಂದು ಮಗಳ ಮೇಲೆ ಗುಂಡು ಹಾರಿಸಿದ್ದ. ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಮೃತ ವಧುವಿನ ತಂದೆ ಖುಬಿ ರಾಮ್ ಪ್ರಜಾಪತಿ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಆರೋಪಿ ಹಾಗೂ ಯುವತಿಯ ನಡುವೆ ಪ್ರೇಮ ಸಂಬಂಧ ಹೊಂದಿದ್ದು, ಆಕೆ ಇನ್ನೊಬ್ಬನ ಜತೆ ವಿವಾಹವಾಗುತ್ತಿರುವುದರ ಬಗ್ಗೆ ಆರೋಪಿ ಆಕ್ರೋಶಗೊಂಡಿದ್ದ ಎನ್ನಲಾಗಿದೆ.. ಗುಂಡಿನ ಶಬ್ದ ಕೇಳಿದ ಕೂಡಲೇ ಮದುವೆಮನೆಯಲ್ಲಿದ್ದ ಸಂಬಂಧಿಕರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು.
ಈ ಘಟನೆಯ ನಂತರ ಆಕೆಯ ಸಂಬದಿಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಎಎನ್ ಐ ಗೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
“ನೀನು ನೋಡಲು ಚೆನ್ನಾಗಿಲ್ಲ” ಎಂದು ನಿಂದಿಸಿ, ಟಾಯ್ಲೆಟ್ ಕ್ಲೀನರ್ ಕುಡಿಸಿ ಗರ್ಭಿಣಿ ಪತ್ನಿಯ ಹತ್ಯೆ
ಕೋಳಿಯನ್ನು ಜೀವಂತವಾಗಿ ಅಂಗಾಂಗ ಕಿತ್ತು ಕೊಂದ ಕೋಳಿ ಅಂಗಡಿ ಮಾಲಿಕ ಅರೆಸ್ಟ್!
ದೂರು ನೀಡಲು ಬಂದಿದ್ದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ!
160 ಭಾಷೆಗಳಲ್ಲಿ ತೆರೆಕಾಣಲಿದೆ ಅವತಾರ್ 2: ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್
ಲಾರಿಗಳ ಮುಖಾಮುಖಿ ಡಿಕ್ಕಿ: ಇಬ್ಬರು ಲಾರಿ ಚಾಲಕರ ದಾರುಣ ಸಾವು