ಭಾರತ ಹಿಂದಿ ಭಾಷಿಗರದ್ದು, ಹಿಂದಿಯನ್ನು ಪ್ರೀತಿಸದವರು ಭಾರತ ಬಿಟ್ಟು ಹೋಗಿ: ಉತ್ತರ ಪ್ರದೇಶ ಸಚಿವ
ಉತ್ತರ ಪ್ರದೇಶ: ಹಿಂದಿಯನ್ನು ಪ್ರೀತಿಸದವರು ಪರಕೀಯರು. ಹಿಂದಿ ಮಾತನಾಡಲು ಬಾರದವರು ಭಾರತ ಬಿಟ್ಟು ಬೇರೆ ಕಡೆ ಹೋಗಿ ಬದುಕಬಹುದು ‘ಭಾರತದಲ್ಲಿ ಇರಬಯಸುವವರು ಹಿಂದಿಯನ್ನು ಪ್ರೀತಿಸಬೇಕು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿದ್ದ ಹಿಂದಿ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರ ರಾಷ್ಟ್ರದಾದ್ಯಂತ ಚರ್ಚೆಗೀಡಾಗುತ್ತಿದೆ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ನಾಂದಿ ಹಾಡಿರುವ ಸಚಿವ ಸಂಜಯ್ ನಿಶಾದ್ ಹಿಂದಿಯೇತರ ಭಾಷಿಗರನ್ನು ಭಾರತ ಬಿಟ್ಟು ಬೇರೆಡೆಗೆ ತೆರಳಿ ಎಂದು ಹೇಳಿಕೆ ನೀಡುವ ಮೂಲಕ ಕಿಡಿ ಹೊತ್ತಿಸಿದ್ದಾರೆ.
ಭಾರತ ಹಿಂದಿ ಭಾಷಿಗರದ್ದು, ಇದನ್ನು ಒಪ್ಪದವರು ದೇಶವನ್ನು ತೊರೆಯಬಹುದು ಎಂದು ಹೇಳಿಕೆ ನೀಡಿರುವ ಅವರು, ದಕ್ಷಿಣ ಭಾರತವನ್ನು ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕೆಣಕಿದ್ದಾರೆ.
ಭಾರತವು ‘ಹಿಂದೂಸ್ಥಾನ’ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಹಿಂದಿ ಭಾಷಿಕರ ನಾಡು ಎಂದರ್ಥ. ಹಿಂದೂಸ್ತಾನವು ಹಿಂದಿಯೇತರ ಭಾಷಿಕರ ಸ್ಥಳವಲ್ಲ. ಅವರು ದೇಶವನ್ನು ಬಿಟ್ಟು ಬೇರೆಡೆ ಇರಬೇಕಾಗುತ್ತದೆ ಎಂದು ಸುಳ್ಳು ಮಾಹಿತಿಯ ಹೇಳಿಕೆ ನೀಡಿದ್ದಾರೆ.
ಭಾರತವನ್ನು, “ಇಂಡಿಯಾ” ಮತ್ತು ಭಾರತ ಎಂಬ ಎರಡೇ ಹೆಸರಿನಲ್ಲಿ ಸಂವಿಧಾನದಲ್ಲಿ ಗುರುತಿಸಲಾಗಿದೆ . ಆದರೆ ಉತ್ತರ ಪ್ರದೇಶದ ಸಚಿವರು ಅತೀ ಬುದ್ಧಿವಂತಿಕೆ ತೋರಿಸಿ ಸಂವಿಧಾನದಲ್ಲಿಲ್ಲದ ಹಿಂದೂಸ್ಥಾನ ಎಂಬ ಹೆಸರನ್ನು ಹಿಂದಿ ಭಾಷೆಯೊಂದಿಗೆ ಜನತೆಯ ಮೇಲೆ ಹೇರಲು ಮುಂದಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರ ದಾರುಣ ಸಾವು
ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!
“ನೀನು ನೋಡಲು ಚೆನ್ನಾಗಿಲ್ಲ” ಎಂದು ನಿಂದಿಸಿ, ಟಾಯ್ಲೆಟ್ ಕ್ಲೀನರ್ ಕುಡಿಸಿ ಗರ್ಭಿಣಿ ಪತ್ನಿಯ ಹತ್ಯೆ
160 ಭಾಷೆಗಳಲ್ಲಿ ತೆರೆಕಾಣಲಿದೆ ಅವತಾರ್ 2: ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್
18 ದಿನಗಳ ಕಣ್ಣಾಮುಚ್ಚಾಲೆ ಬಳಿಕ ಸಿಐಡಿಗೆ ಸಿಕ್ಕಿ ಬಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ