ಮತ್ತೊಮ್ಮೆ ಪ್ರಶಸ್ತಿ ಪಡೆದ “ಜೈ ಭೀಮ್” ಚಿತ್ರ: ಒಂದೇ ಸಮಾರಂಭದಲ್ಲಿ 2 ಪ್ರಶಸ್ತಿ!
ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರಗಳಲ್ಲಿ ಸೂರ್ಯ ನಟನೆಯ ‘ಜೈ ಭೀಮ್’ ಕೂಡ ಒಂದಾಗಿದೆ. ಚಿತ್ರ ಬಿಡುಗಡೆಯ ಬಳಿಕ ಪ್ರಶಸ್ತಿಗಳ ಸರಮಾಲೆಯನ್ನೇ ಗೆದ್ದಿರುವುದು ಚಿತ್ರದ ಇನ್ನೊಂದು ಹಿರಿಮೆಯಾಗಿದೆ.
ಇದೀಗ ದಾದಾ ಸಾಹಿಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ‘ಜೈ ಭೀಮ್’ ಅತ್ಯುತ್ತಮ ಚಿತ್ರ ಸೇರಿದಂತೆ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿಯಲ್ಲದೆ, ಚಿತ್ರದಲ್ಲಿನ ರಾಜಕಣ್ಣು ಪಾತ್ರಕ್ಕಾಗಿ ಮಣಿಕಂಡನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಜ್ಞಾನವೇಲ್ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ, ಲಿಜೋಮೋಲ್ ಮತ್ತು ಮಣಿಕಂಡನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ನ್ಯಾಯಮೂರ್ತಿ ಚಂದ್ರು ಅವರ ಜೀವನ ಕಥೆಯನ್ನು ಆಧರಿಸಿದೆ ಮತ್ತು ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಈಗಾಗಲೇ ಗೆದ್ದಿದೆ.
ಚಿತ್ರವನ್ನು ಸೂರ್ಯ ಅವರ ಬ್ಯಾನರ್ “ಟುಡಿ ಎಂಟರ್ ಟೈನ್‌ಮೆಂಟ್” ನಿರ್ಮಿಸಿದೆ. ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಚಂದ್ರು ಅವರ ಜೀವನ ಅನುಭವವನ್ನು ಆಧರಿಸಿದ ಚಿತ್ರ ಇದಾಗಿದ್ದು, 1995ರಲ್ಲಿ ಕಳ್ಳತನದ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬುಡಕಟ್ಟು ಜನಾಂಗದ ಯುವಕ ರಾಜಾಕಣ್ಣನ್ ನಾಪತ್ತೆ ಪ್ರಕರಣದ ಕಾನೂನು ಹೋರಾಟದ ಕುರಿತಾದ ಚಿತ್ರ ಇದಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಇಂದಿಗೆ ಹೆಚ್ಚು ಪ್ರಸ್ತುತವಾಗಿರುವ ಮಹಾರ್ ಸಮುದಾಯವನ್ನುದ್ದೇಶಿಸಿ ಅಂಬೇಡ್ಕರರು ಹೇಳಿದ ಆ ಮಾತುಗಳು!
“ಬಿಎಸ್ ಪಿಯನ್ನು ಮಾಯಾವತಿ ಬಿಜೆಪಿಗೆ ಮಾರಾಟ ಮಾಡಿದ್ದಾರೆ”
ದಲಿತರ ಹಕ್ಕುಗಳನ್ನು ರಕ್ಷಿಸುವವರಾರು ?