ಯೂಟ್ಯೂಬರ್  ರಿಫಾ ಮೆಹ್ನು ಅನುಮಾನಾಸ್ಪದ ಸಾವಿಗೆ ಹೊಸ ಟ್ವಿಸ್ಟ್: ಸಮಾಧಿಯಿಂದ ಮೃತದೇಹ ಹೊರ ತೆಗೆದ ಪೊಲೀಸರು - Mahanayaka
7:25 PM Wednesday 11 - December 2024

ಯೂಟ್ಯೂಬರ್  ರಿಫಾ ಮೆಹ್ನು ಅನುಮಾನಾಸ್ಪದ ಸಾವಿಗೆ ಹೊಸ ಟ್ವಿಸ್ಟ್: ಸಮಾಧಿಯಿಂದ ಮೃತದೇಹ ಹೊರ ತೆಗೆದ ಪೊಲೀಸರು

rifa mehnu
07/05/2022

ಕೇರಳ: ಹಲವು ಅಚ್ಚರಿ, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದ ಕೇರಳದ ಖ್ಯಾತ ಯೂಟ್ಯೂಬರ್  ರಿಫಾ ಮೆಹ್ನು ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ದೊರಕಿದ್ದು,  ಕೇರಳ ಪೊಲೀಸರು ರಿಫಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮಾಧಿಯಿಂದ ಹೊರ ತೆಗೆದಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಅನುಮತಿ ದೊರೆತ ಬೆನ್ನಲ್ಲೇ ಕೇರಳ ಪೊಲೀಸರು ಮಹತ್ವದ ತನಿಖೆ ಆರಂಭಿಸಿದ್ದು, ಸಮಾಧಿ ಜಾಗದಿಂದ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಮಾರ್ಚ್ 1ರಂದು ದುಬೈನ್ ಫ್ಲ್ಯಾಟ್ ವೊಂದರಲ್ಲಿ ರಿಫಾಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದುಬೈ ರಾಯಭಾರ ಕಚೇರಿ ಮೂಲಕ ಮೃತದೇಹವನ್ನು ಊರಿಗೆ ತರಲಾಗಿತ್ತು. ಆ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ನಡೆಸದೆಯೇ ಕುಟುಂಬಸ್ಥರು ಕೋಝಿಕ್ಕೋಡ್ ನ ಪವಂದೂರು ಜುಮಾ ಮಸೀದಿಯಲ್ಲಿ ಮಾರ್ಚ್ 3ರಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ರಿಫಾ ಸಾವಿಗೀಡಾಗುವುದಕ್ಕೂ ಕೆಲವೇ ಗಂಟೆಗಳ ಮುಂಚೆ ಪತಿಯೊಂದಿಗೆ ಬರ್ಜ್ ಖಲೀಫ ಮುಂದೆ ನಿಂತು ವಿಡಿಯೋ ಮಾಡಿದ್ದರು. ಇದಾಗಿ ಕೆಲವೇ ಗಂಟೆಗಳ ಬಳಿಕ ರಿಫಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು.

ಊರಿಗೆ ಊರೇ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅಂತೆಯೇ ರಿಫಾ ಮನೆಯವರಿಗೂ ಈ ಬಗ್ಗೆ ಅನುಮಾನ ಮೂಡಿತ್ತು. ರಿಫಾಳ ಪತಿ ಮೆಹನಾಸ್ ಮೇಲೆ ಪೋಷಕರಿಗೆ ಬಲವಾದ ಅನುಮಾನ ಕಾಡಲು ಆರಂಭಿಸಿದ್ದರಿಂದ ಅವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಸಂಬಂಧಪಟ್ಟ ಅಧಿಕಾರಿಗಳ ಒಪ್ಪಿಗೆ ಪಡೆದ ಪೊಲೀಸರು ಇದೀಗ ಮೃತದೇಹವನ್ನು ಸಮಾಧಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

2 ವರ್ಷದ ಮಗನ ಮುಂದೆಯೇ ಮಹಿಳೆಯ ಮೇಲೆ 79 ದಿನಗಳ ಕಾಲ ಮಂತ್ರವಾದಿಯಿಂದ ಅತ್ಯಾಚಾರ!

ಉಡುಪಿ: ಕಾಂಗ್ರೆಸ್ ತೊರೆದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಕಾಡಿನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ಹುಲಿ ದಾಳಿ: ಯುವಕ ಸಾವು

ತೀವ್ರ ಸ್ವರೂಪ ಪಡೆದುಕೊಂಡ ಪ್ರಜೆಗಳ ಹೋರಾಟ: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ

ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಇನ್ನಿಲ್ಲ

ಇತ್ತೀಚಿನ ಸುದ್ದಿ