ಮದುವೆಯ ಸುದ್ದಿ ಹರಡಿದವರಿಗೆ ಕಾಲಿನ ಫೋಟೋ ಹಾಕಿ ತಿರುಗೇಟು ನೀಡಿದ ಸಾಯಿ ಪಲ್ಲವಿ
ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಸಾಯಿ ಪಲ್ಲವಿ, ಸದಾ ಪಾಸಿಟಿವ್ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಹಾಗೆಯೇ ಅವರು ಹೋದಲ್ಲಿ ಬಂದಲ್ಲಿ ಮದುವೆಯ ವಿಚಾರಗಳು ಕೂಡ ಪ್ರಸ್ತಾಪವಾಗುತ್ತಲೇ ಇರುತ್ತದೆ.
ಆದರೆ ಇತ್ತೀಚೆಗೆ ಕೆಲವರು, ಸಾಯಿ ಪಲ್ಲವಿ ವಿವಾಹವಾಗ್ತಿದ್ದಾರೆ. ಅನ್ನೋ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಇದನ್ನು ಹಾಗೆಯೇ ಎತ್ತಿಕೊಂಡ ಮಾಧ್ಯಮಗಳು ತಾವೂ ಅದೇ ರೀತಿಯಲ್ಲಿ ಪ್ರಸಾರ ಮಾಡಿದ್ದವು. ತಮ್ಮ ಮದುವೆಯ ಸುದ್ದಿಯಿಂದ ರೋಸಿ ಹೋದ ಸಾಯಿ ಪಲ್ಲವಿ ಸುಳ್ಳು ಸುದ್ದಿ ಹರಡಿದವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.
ಸಾಯಿ ಪಲ್ಲವಿ ಯಾವುದೇ ಹೇಳಿಕೆ ನೀಡದೇ ಮಹಿಳೆಯೊಬ್ಬರು ಚಪ್ಪಲಿ ಧರಿಸಿ ಓಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಾಯಿ ಪಲ್ಲವಿ ಯಾಕೆ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿಲ್ಲ. ಆದರೆ, ಅವಳೊಂದು ಅಚ್ಚರಿ, ಸ್ವಲ್ಪ ಸಮಯ ಬಚ್ಚಿಟ್ಟುಕೊಂಡಿದ್ದಳು. ಸೋಮವಾರ ನಿಮ್ಮನ್ನು ನೋಡಲು ಆಕೆ ಸಿದ್ಧವಾಗಿದ್ದಾಳೆ ಎನಿಸುತ್ತಿದೆ ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ನಾಳೆ (ಮೇ 9) ನಟಿ ಸಾಯಿಪಲ್ಲವಿ ಅವರ ಹುಟ್ಟು ಹುಬ್ಬವೂ ಹೌದು. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಾಯಿ ಪಲ್ಲವಿ ಸರ್ಪ್ರೈಸ್ ನೀಡುವಂತಹ ಫೋಟೋವನ್ನು ಶೇರ್ ಮಾಡಿದ್ದಾರೆ. ಮದುವೆ ಸುದ್ದಿ ಹಬ್ಬಿಸಿದವರಿಗೆ ಕಾಲಿನ ಫೋಟೋ ಹಾಕಿ ಬಿಟ್ರಾ? ಎನ್ನುವ ಚರ್ಚೆಗಳು ಇದೀಗ ಅಭಿಮಾನಿಗಳಿಂದ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದರು: ನಳಿನ್ ಕುಮಾರ್ ಕಟೀಲ್ ವಾಗ್ದಾಳಿ
ʼ ಅಮ್ಮʼ ಎಂದರೆ ಆತ್ಮಸ್ಥೈರ್ಯದ ಸಂಕೇತ | ಬದುಕಿನ ಪುಟಗಳನ್ನು ತೆರೆದುನೋಡಿದಾಗ
ಕಡಬ ಚರ್ಚ್ ದಾಳಿ: ದೂರು ನೀಡಿದವರ ವಿರುದ್ಧವೇ ಸುಳ್ಳು ದೂರು | ಎಸ್ ಡಿಪಿಐ ಆಕ್ರೋಶ
ತೀವ್ರ ಸ್ವರೂಪ ಪಡೆದುಕೊಂಡ ಪ್ರಜೆಗಳ ಹೋರಾಟ: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ