ನೋವಲ್ಲಿ ಧೈರ್ಯ ತುಂಬುವ, ಕಷ್ಟದಲ್ಲಿ ನೆರವಾಗುವ ದಾದಿಯರಿಗೆ ನಮನ
- ಕುಮಾರ್, ರಾಜೀವ್ ಆಸ್ಪತ್ರೆ ಹಾಸನ
ಮತ್ತೊಬ್ಬರ ಸೇವೆಯೇ ದೇವರು, ಸಂಕಷ್ಟದಲ್ಲಿರುವವರ ಆರೈಕೆಯೇ ಉಸಿರು. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವುದಕ್ಕೇ ಜೀವನ ಮುಡಿಪು. ಹೌದು, ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕಾರ್ಯವೂ ಮಹತ್ವದ್ದು. ಎಂತಹದ್ದೇ ಸನ್ನಿವೇಶ ಬಂದರೂ ಇನ್ನೊಬ್ಬರಿಗಾಗಿ ಸೇವೆ ಸಲ್ಲಿಸುವವರು ಇವರು. ಇವರ ನಗುಮುಖದ ಸೇವೆಯೇ ರೋಗಿಗಳ ಪಾಲಿಗೆ ದೊಡ್ಡ ಧೈರ್ಯ, ಚೈತನ್ಯವನ್ನು ತರುತ್ತದೆ. ಇವರ ಸಾಂತ್ವನದ ನುಡಿ ಬದುಕಿನ ಭರವಸೆಯನ್ನು ತರುತ್ತದೆ. ಹೀಗಾಗಿ, ದಾದಿಯರಿಗೆ ಅವರದ್ದೇ ಆದ ಮಹತ್ವದ ಸ್ಥಾನವಿದೆ.
ನರ್ಸ್‍ಗಳು ಆರೋಗ್ಯದ ನಾಡಿಮಿಡಿತ, ಆರೈಕೆಯ ದೇವಾನುದೇವತೆಯರು. ದಾದಿಯರು, ಶುಶ್ರೂಷಕರು ಹೀಗೆ ನಾನಾ ಹೆಸರಿದ್ದರೂ ಅವರ ಉದ್ದೇಶ ಮಾತ್ರ ಒಂದೇ. ಅದುವೇ ಜನರ ಆರೋಗ್ಯ ಕಾಳಜಿ. ರೋಗಿಗಳಿಗೆ ಒಂದು ಸಣ್ಣ ಮಾತ್ರೆ ಕೊಡುವುದರಿಂದ ಹಿಡಿದು ದೊಡ್ಡ ದೊಡ್ಡ ವೈದ್ಯರಿಗೆ ಸಹಾಯಕರಾಗಿ ಕೆಲಸ ಮಾಡುವ ಇವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವೇ.
ದಿನಗಟ್ಟಲೆ ನೂರಾರು ರೋಗಿಗಳ ಆರೈಕೆ ಮಾಡುತ್ತಲೇ ಇರುವ ನರ್ಸ್‍ಗಳು ಕೊರೋನಾ ವೇಳೆ ಮನೆ ತೊರೆದು ಜೀವವನ್ನು ಪಣಕ್ಕಿಟ್ಟು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಇವರ ದಿನ. ಅಂದರೆ ಇಂದು ಅಂತಾರಾಷ್ಟ್ರೀಯ ಶುಶ್ರೂಷಕರ ದಿನ. ನಾವು ಇಂದಿನ ಸಂದಿಗ್ಧ ಸಮಯದಲ್ಲಿ ಶ್ರಮ, ಪ್ರಯತ್ನ, ಬದ್ಧತೆಯಿಂದ ಕಾರ್ಯನಿರ್ವಹಿಸುವ ಪ್ರತಿಯೊಬ್ಬರನ್ನು ಗೌರವಿಸಲೇಬೇಕು. ಇದು ನಮ್ಮ ಕರ್ತವ್ಯವೂ ಹೌದು.ಅದರಲ್ಲೂ ಈಗ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಎಷ್ಟು ಹೊಗಳಿದರೂ ಅದು ಕಡಿಮೆಯೇ.
ಕೊರೊನಾದಂತಹ ಮಹಾಮಾರಿ ವಕ್ಕರಿಸಿ ರುದ್ರನರ್ತನಗೈಯುತ್ತಿರುವಾಗಲೂ ವೈದ್ಯರೊಂದಿಗೆ ದಾದಿಯರೂ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಸದಾ ಬೇರೆಯವರ ಒಳಿತಿಗಾಗಿ ಬದುಕು ಮುಡಿಪಾಗಿಟ್ಟ ದಾದಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ.
ಸುದ್ದಿಗಾಗಿ ಸೇವೆ ಮಾಡಬೇಡ, ಸೇವೆ ಮಾಡಿ ಸುದ್ದಿಯಾಗಬೇಡ, ಸದ್ದಿಲ್ಲದೇ ಸೇವೆ ಮಾಡು ಎಂಬ ಮಹಾತಾಯಿ ಮದರ್ ಥೆರೇಸಾ ಅವರ ಮಾತಿಗೆ ಹೇಳಿ ಮಾಡಿಸಿದವರು ನರ್ಸ್‍ಗಳು ಎಂದರೆ ತಪ್ಪಾಗಲಾರದು. ಈ ವೇಳೆ ಇವರಿಗಾಗಿ ಇರುವ ದಿನದ ಮಹತ್ವವನ್ನು ಅರಿಯುವುದು ಬಹುಮುಖ್ಯ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಾಲುಣಿಸುವ ತಾಯಂದಿರಿಗಾಗಿ ರೈಲ್ವೆಯಿಂದ “ಬೇಬಿ ಬರ್ತ್”
ಈ 3 ವಿಷಯ ಸರ್ಚ್ ಮಾಡಿದರೆ ನೀವು ಜೈಲು ಸೇರುವುದು ಗ್ಯಾರಂಟಿ!
ಕುತುಬ್ ಮಿನಾರ್ ಗೆ ವಿಷ್ಣು ಸ್ತಂಭ ಅಂತ ಹೆಸರಿಡಿ: ಮತ್ತೊಂದು ವಿವಾದ ಆರಂಭ
ಧ್ವನಿವರ್ಧಕ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ: ಎಷ್ಟು ಗಂಟೆವರೆಗೆ ಧ್ವನಿವರ್ಧಕ ಬಳಸಬಹುದು?
ವಿದ್ಯುತ್ ಸ್ಪರ್ಶದಿಂದ ಜೂ.ರವಿಚಂದ್ರನ್ ಸಾವು