ಸ್ವಾಮೀಜಿ ವೇಷದಲ್ಲಿ ಸಿಕ್ಕಿ ಬಿದ್ದ ಆ್ಯಸಿಡ್ ದಾಳಿ ಆರೋಪಿ ನಾಗೇಶ್!
ಬೆಂಗಳೂರು: ಆ್ಯಸಿಡ್ ದಾಳಿ ಮಾಡಿ ತಲೆ ಮರೆಸಿಕೊಂಡಿದ್ದ ಕಿರಾತಕ ನಾಗೇಶ್ ನನ್ನು ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯದ ಬಳಿಕ ಆರೋಪಿಯು ಸ್ವಾಮೀಜಿಯ ವೇಷ ಧರಿಸಿ ತಿರುಗಾಡುತ್ತಿದ್ದ ಎಂದು ತಿಳಿದು ಬಂದಿದೆ.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸ್ವಾಮೀಜಿ ವೇಷದಲ್ಲಿದ್ದ ನಾಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಏ.28ರ ಗುರುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಭಗ್ನಪ್ರೇಮಿ ನಾಗೇಶ್ ಆ್ಯಸಿಡ್ ಹಾಕಿ ಪರಾರಿಯಾಗಿದ್ದ. ಕಳೆದ 16 ದಿನಗಳಿಂದ ತಲೆಮರೆಸಿಕೊಂಡಿದ್ದ ನಾಗೇಶ್ ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ತಿರುವಣ್ಣಾಮಲೈನ ಆಶ್ರಮವೊಂದರಲ್ಲಿ ಸ್ವಾಮೀಜಿ ವೇಷದಲ್ಲಿ ಇರುವುದು ಖಚಿತಪಡಿಸಿಕೊಂಡ ಪೊಲೀಸರು ಭಕ್ತರ ಸೋಗಲ್ಲಿ ಆಶ್ರಮಕ್ಕೆ ತೆರಳಿದ್ದರು. ಕೊನೆಗೂ ಆರೋಪಿ ನಾಗೇಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರು ನೋವು ಹೇಗೆ ಸಹಿಸುತ್ತಾರೆ?: ಭಾವುಕ ನುಡಿಗಳನ್ನಾಡಿದ ಸಿಎಂ ಬೊಮ್ಮಾಯಿ
ನಿಂಬೆ ಹಣ್ಣಿಗೆ ಕೆ.ಜಿಗೆ 300: ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಚಿನ್ ಪೈಲಟ್
ಬೆಂಗಳೂರು ಡೇಸ್ ಖ್ಯಾತಿಯ ನತಾಶಾ ನಾಯಿಮರಿ ಇನ್ನು ಕೇವಲ ನೆನಪು ಮಾತ್ರ