ಪೊಲೀಸ್ ಕೈಗೆ ಸಿಗುವ ಬದಲು ಅವನು ಜನರ ಕೈಗೆ ಸಿಕ್ಕಿದ್ದಿದ್ರೆ… | ಸಂತ್ರಸ್ತೆಯ ದೊಡ್ಡಪ್ಪನ ಆಕ್ರೋಶದ ಮಾತು
ಬೆಂಗಳೂರು: ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ವಿಚಾರವಾಗಿ ಸಂತ್ರಸ್ತ ಯುವತಿಯ ದೊಡ್ಡಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಮಗೆ ಸ್ವಲ್ಪ ನೆಮ್ಮದಿಯಾಗಿದೆ. ಆದರೆ, ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆಯವರು ಅವರ ಕರ್ತವ್ಯ ಮಾಡಿದ್ದಾರೆ. ಸರ್ಕಾರ ನಮ್ಮ ಕಾನೂನಿನಡಿಯಲ್ಲಿ ಆರೋಪಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಪೊಲೀಸರು ಹಗಲು ರಾತ್ರಿ ನಿದ್ದೆ ಮಾಡದೇ ಆರೋಪಿಯನ್ನು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಸ್ವಾಮೀಜಿ ವೇಷದಲ್ಲಿದ್ದ ಆತನನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದ್ದಾರೆ. ಸರ್ಕಾರ ಹಾಗೂ ಕಾನೂನು ಅವನಿಗೆ ಮರಣ ದಂಡನೆಯನ್ನು ವಿಧಿಸಬೇಕು ಎಂದು ಒತ್ತಾಯಿಸಿದರು.
ಅವನೊಬ್ಬ ಅಯೋಗ್ಯ, ಅವನು ನಮ್ಮ ಕೈಗೆ ಸಿಗುವ ಬದಲು ಜನರ ಕೈಗೆ ಸಿಕ್ಕದ್ದಿದ್ದರೆ, ಅವನು ನಮ್ಮ ಹುಡುಗಿಗೆ ಮಾಡಿದ ಅನ್ಯಾಯಕ್ಕಿಂತ ಹತ್ತುಪಟ್ಟು ಅನುಭವಿಸುತ್ತಿದ್ದ ಜನಗಳೇ ಅವನನ್ನು ಹೊಡೆದು ಬಿಸಾಕ್ತಿದ್ರು. ಆದ್ರೆ, ಅವನು ಮಿಸ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆ್ಯಸಿಡ್ ನಾಗೇಶ್ ನ ಮೇಲೆ ಗುಂಡು ಹಾರಿಸಿದ ಪೊಲೀಸರು!
ಆಸಿಡ್ ಯಾಕೆ ಹಾಕಿದ್ದು ಎಂಬ ಪ್ರಶ್ನೆಗೆ ನಾಗೇಶನ ಉತ್ತರ ಏನು ಗೊತ್ತಾ?
ಸ್ವಾಮೀಜಿ ವೇಷದಲ್ಲಿ ಸಿಕ್ಕಿ ಬಿದ್ದ ಆ್ಯಸಿಡ್ ದಾಳಿ ಆರೋಪಿ ನಾಗೇಶ್!
ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರು ನೋವು ಹೇಗೆ ಸಹಿಸುತ್ತಾರೆ?: ಭಾವುಕ ನುಡಿಗಳನ್ನಾಡಿದ ಸಿಎಂ ಬೊಮ್ಮಾಯಿ