ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಹೊಸ ವಿವಾದ
ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು ಇದರಲ್ಲಿರುವ ‘ಪಾತಾಳ ಪಾತಾಳ.’ ಎನ್ನುವ ಸಾಹಿತ್ಯವಿರುವ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕು ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.
ಸದ್ಯ ವಿವಾದದಲ್ಲಿ ಸಿಲುಕಿರುವ ಪಾತಾಳ್ ಪಾತಾಳ್ ಹಾಡನ್ನು ಕಮಲ್ ಹಾಸನ್ ಅವರೇ ಬರೆದು ಹಾಡಿರುವ ಹಾಡಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸುವ ಸಾಲುಗಳಿವೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅವರು ಕಮಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಅಣಕಿಸಲಾಗಿದೆ ಮತ್ತು ಕೊವಿಡ್ ನಿಧಿ ಸಂಗ್ರಹ ಹಣದ ಬಗ್ಗೆ ನಕಾರಾತ್ಮಕ ವಾಗಿ ಸಾಲಿನಲ್ಲಿ ಉಲ್ಲೇಖಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಡಿನ ಅರ್ಥ ‘ಖಜಾನೆಯಲ್ಲಿ ಹಣವಿಲ್ಲ, ಜ್ವರ ಮತ್ತು ರೋಗಗಳು ಹೆಚ್ಚುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ ಮಾಡಿದ ತಪ್ಪಿನಿಂದಾಗಿ ಏನು ಉಳಿದಿಲ್ಲ.ಕೀ ಈಗ ಕಳ್ಳನ ಬಳಿ ಇದೆ’ ಎನ್ನುವ ಅರ್ಥದ ಸಾಲು ಈ ಹಾಡಿನಲ್ಲಿ ಇದೆ ಎನ್ನುವ ಕಾರಣಕ್ಕಾಗಿ ಕಮಲ್ ಹಾಸನ್ ವಿರುದ್ಧ ದೂರು ದಾಖಲಿಸಲಾಗಿದೆ.
ಸೆಲ್ವಂ ಎನ್ನುವ ವ್ಯಕ್ತಿ ಮೇ 12ರಂದು ಚೆನ್ನೈ ಪೊಲೀಸ್ ಕಮಿಷನರ್ ದೂರು ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅವಧಿಗೂ ಮುನ್ನ ಮುಂಗಾರು ಪ್ರವೇಶ ಸಾಧ್ಯತೆ!
ಪೊಲೀಸ್ ಕೈಗೆ ಸಿಗುವ ಬದಲು ಅವನು ಜನರ ಕೈಗೆ ಸಿಕ್ಕಿದ್ದಿದ್ರೆ… | ಸಂತ್ರಸ್ತೆಯ ದೊಡ್ಡಪ್ಪನ ಆಕ್ರೋಶದ ಮಾತು
ಆ್ಯಸಿಡ್ ನಾಗೇಶ್ ನ ಮೇಲೆ ಗುಂಡು ಹಾರಿಸಿದ ಪೊಲೀಸರು!
ಆಸಿಡ್ ಯಾಕೆ ಹಾಕಿದ್ದು ಎಂಬ ಪ್ರಶ್ನೆಗೆ ನಾಗೇಶನ ಉತ್ತರ ಏನು ಗೊತ್ತಾ?
ಸ್ವಾಮೀಜಿ ವೇಷದಲ್ಲಿ ಸಿಕ್ಕಿ ಬಿದ್ದ ಆ್ಯಸಿಡ್ ದಾಳಿ ಆರೋಪಿ ನಾಗೇಶ್!