ಮತ್ತೋರ್ವ ಕ್ರಿಕೆಟ್ ಆಟಗಾರ ನಿಧನ: ಅಪಘಾತಕ್ಕೆ ಬಲಿಯಾದ ಆ್ಯಂಡ್ರೋ ಸೈಮಂಡ್ಸ್
ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಆಟಗಾರ ಆ್ಯಂಡ್ರೋ ಸೈಮಂಡ್ಸ್ ಅಪಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದ್ದು, ಅವರ ಅಭಿಮಾನಿಗಳಿಗೆ ತೀವ್ರ ಆಘಾತವಾಗಿದೆ.
ಶನಿವಾರ ರಾತ್ರಿ ಕ್ವೀನ್ಸ್ ಲ್ಯಾಂಡ್ ನ ಟೌನ್ಸ್ ವಿಲ್ಲೆಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಹಾರ್ವೇರೆಂಡ್ ಎಂಬಲ್ಲಿ ಈ ಅಪಘಾತವಾಗಿದ್ದು, ಅಪಘಾತದ ವೇಳೆ ಕಾರಿನಲ್ಲಿ ಆ್ಯಂಡ್ರೋ ಸೈಮಂಡ್ಸ್ ಒಬ್ಬರೇ ಇದ್ದರು ಎನ್ನಲಾಗಿದೆ.
ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಈ ಅಪಘಾತ ನಡೆದಿದ್ದು, ಆ್ಯಂಡ್ರೋ ಸೈಮಂಡ್ಸ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಹೊರಕ್ಕೆಸೆಯಲ್ಪಟ್ಟಿದ್ದು ಪರಿಣಾಮವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೆ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹಠಾತ್ ಸಾವು ಕ್ರಿಕೆಟ್ ಪ್ರಿಯರಿಗೆ ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಆ್ಯಂಡ್ರೋ ಸೈಮಂಡ್ಸ್ ಸಾವು ಮತ್ತೊಮ್ಮೆ ಶಾಕ್ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಹೊಸ ವಿವಾದ
ಅವಧಿಗೂ ಮುನ್ನ ಮುಂಗಾರು ಪ್ರವೇಶ ಸಾಧ್ಯತೆ!
ಪೊಲೀಸ್ ಕೈಗೆ ಸಿಗುವ ಬದಲು ಅವನು ಜನರ ಕೈಗೆ ಸಿಕ್ಕಿದ್ದಿದ್ರೆ… | ಸಂತ್ರಸ್ತೆಯ ದೊಡ್ಡಪ್ಪನ ಆಕ್ರೋಶದ ಮಾತು