ಆಕ್ಸಿಜನ್ ಸಹಾಯವಿಲ್ಲದೆ ಎವರೆಸ್ಟ್ ಏರಿದ ಮೊದಲ ವೈದ್ಯ ದಂಪತಿಗಳು!
ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಆಕ್ಸಿಜನ್ ಸಹಾಯವಿಲ್ಲದೆ ಏರಿದ ಸಾಧನೆಯನ್ನು ವೈದ್ಯ ದಂಪತಿ ಮಾಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾದ ಡಾ. ಹೇಮಂತ್ ಲಲಿತ್ ಚಂದ್ರ ಲೇವಾ ಮತ್ತು ಅವರ ಪತ್ನಿ ಡಾ. ಸುರಭಿಬೆನ್ ಲೆವಾ, ಅವರು ಪೂರಕ ಆಮ್ಲಜನಕದ ಸಹಾಯವಿಲ್ಲದೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ವಶಪಡಿಸಿಕೊಂಡರು.
ವೈದ್ಯರು ರೋಗಿಗಳ ಜೀವವನ್ನು ಉಳಿಸಲು ಮಾತ್ರವಲ್ಲ, ಪ್ರಪಂಚದ ದೊಡ್ಡ ಶಿಖರವನ್ನು ವಶಪಡಿಸಿಕೊಳ್ಳಬಹುದು ಎಂದು ಅವರು ಸಾಬೀತುಪಡಿಸಿದ್ದಾರೆ.ಇವರು ಗುಜರಾತ್ ಮೂಲದವರಾಗಿದ್ದಾರೆ.
ಸಮುದ್ರ ಮಟ್ಟದಿಂದ 8849 ಮೀಟರ್ ಎತ್ತರವನ್ನುಇವರು ಏರಿದರು. ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ವೈದ್ಯ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.NHL ಮುನ್ಸಿಪಲ್ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಹೇಮಂತ್ ಮತ್ತು ಗುಜರಾತ್ ವಿದ್ಯಾಪೀಠದ ಮುಖ್ಯ ವೈದ್ಯಾಧಿಕಾರಿ ಸುರಭಿಬೆನ್ ಅವರು ಪರಿಸರವನ್ನು ರಕ್ಷಿಸುವ ಸಂದೇಶವನ್ನು ಹರಡಲು ಪರ್ವತವನ್ನು ಏರಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನಿವಾಸಗಳ ಮೇಲೆ ಸಿಬಿಐ ದಾಳಿ
ಇನ್ನು ಮುಂದೆ ಬೆಳಗ್ಗೆ 6 ಗಂಟೆಗೆ ಆಜಾನ್ ಕೂಗಲು ನಿರ್ಧಾರ!
ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸಿ.ಹೆಚ್.ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ
ಕ್ವಾರಿ ದುರಂತ: ಬಂಡೆ ಉರುಳಿ ಬಿದ್ದು 3 ಮಂದಿ ಸಾವು, ಹಿಟಾಚಿಯೊಳಗೆ ಸಿಲುಕಿರುವ ಚಾಲಕ
ಫೇಸ್ ಬುಕ್ ಲೈವ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಪೊಲೀಸರು