ಕೆರೆಯಲ್ಲಿ ಮುಳುಗಿ 9ನೇ ತರಗತಿಯ ಇಬ್ಬರು ಬಾಲಕರು ಸಾವು - Mahanayaka
4:14 PM Thursday 12 - December 2024

ಕೆರೆಯಲ್ಲಿ ಮುಳುಗಿ 9ನೇ ತರಗತಿಯ ಇಬ್ಬರು ಬಾಲಕರು ಸಾವು

kasaragoad
19/05/2022

ಕಾಸರಗೋಡು: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ಕಾಸರಗೋಡಿನ ಪೆರಿಯ ಸಮೀಪದ ಚೆರ್ಕಪ್ಪಾರದಲ್ಲಿ ನಡೆದಿದೆ.

14 ವರ್ಷ ವಯಸ್ಸಿನವರಾದ ದಿಲ್ ಜಿತ್ ಹಾಗೂ ನಂದ ಗೋಪಾಲ್ ಮೃತಪಟ್ಟ ಬಾಲಕರು ಎಂದು ಗುರುತಿಸಲಾಗಿದ್ದು, ಇಬ್ಬರು ಕೂಡ 9ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದು ಬಂದಿದೆ.

ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ ಚೆರ್ಕಪ್ಪಾರ ಶಾಲಾ ಸಮೀಪದ ಕೆರೆಗೆ ಸಹಪಾಠಿಗಳ ಜೊತೆ ಸ್ನಾನಕ್ಕಿಳಿದಿದ್ದರು. ಆರು ಮಂದಿ ಕೆರೆಗೆ ಇಳಿದಿದ್ದರು. ಈ ಪೈಕಿ ಇಬ್ಬರು ಕೆಸರಿನಲ್ಲಿ ಸಿಲುಕಿದ್ದು ಮೇಲೆ ಬರಲಾರದೆ ನೀರಿನಲ್ಲಿ ಮುಳುಗಿದ್ದರು.

ಇತರ ವಿದ್ಯಾರ್ಥಿಗಳ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಅಗ್ನಿಶಾಮಕಕ್ಕೆ ಕರೆ ಮಾಡಿದ್ದು,  ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅದಾಗಲೇ ಇಬ್ಬರೂ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಶಿವಲಿಂಗದ ಬಗ್ಗೆ ಅವಹೇಳನಾಕಾರಿ ಪೋಸ್ಟ್: ಎಐಎಂಐಎಂ ನಾಯಕ ಅರೆಸ್ಟ್

ಮೊಮ್ಮಗುವನ್ನು ನೋಡಲು ಆಸ್ಪತ್ರೆಗೆ ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ!

ಪೊಲೀಸರೇ ಅಪರಾಧದಲ್ಲಿ ಭಾಗಿಯಾದರೆ ಸಾರ್ವಜನಿಕರ ರಕ್ಷಣೆ ಹೇಗೆ?:  ಅರಗ ಜ್ಞಾನೇಂದ್ರ  ಪ್ರಶ್ನೆ

32 ವರ್ಷಗಳ ಜೈಲು ಶಿಕ್ಷೆಯ ಬಳಿಕ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ ಬಿಡುಗಡೆ

ಇತ್ತೀಚಿನ ಸುದ್ದಿ