ಬ್ರಿಟಿಷರು ಟಿಪ್ಪುವಿನ ಬಗ್ಗೆ ಬರೆದ ಪುಸ್ತಕಗಳನ್ನು ತೆಗೆದು ಬಿಜೆಪಿಯವರು ಓದಲಿ: ಕಾಂಗ್ರೆಸ್
ಬೆಂಗಳೂರು: ಬ್ರಿಟೀಷರ ಪಾಲಿನ ಸಿಂಹಸ್ವಪ್ನವಾಗಿದ್ದ ಟಿಪ್ಪುವಿನ ಬಗ್ಗೆ ಬ್ರಿಟೀಷರೇ ಬರೆದ ಅನೇಕ ಪುಸ್ತಕಗಳಿವೆ ಬಿಜೆಪಿಗರು ಅದನ್ನು ಕೊಂಡು ಓದುವುದು ಒಳಿತು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
’ಟಿಪ್ಪು ಸುಲ್ತಾನ್ ಮತಾಂಧನಲ್ಲ ಎನ್ನುವ “ಜಾಣಕುರುಡುತನ ಮತ್ತು ಜಾಣಕಿವುಡುತನ” ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ’ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.
ಸೋಮವಾರ ಟ್ವೀಟ್ ಮಾಡಿದ್ದ ಬಿಜೆಪಿ,’ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ. ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ತಮ್ಮ ಇಬ್ಬಂದಿತನಕ್ಕೆ ಔಷಧಿ ಕಂಡುಕೊಳ್ಳಲಿ. ಕಂದಾಯ ದಾಖಲೆಗಳಿಂದಲೂ ಕನ್ನಡ ಅಳಿಸಿ ಪರ್ಷಿಯನ್ ಜಾರಿಗೊಳಿಸಿದ ಜಿಹಾದಿ ಮನಸ್ಥಿತಿಯ ಟಿಪ್ಪುವಿನ ಬಗ್ಗೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಪ್ರೀತಿ?’ ಎಂದು ಪ್ರಶ್ನಿಸಿತ್ತು.
‘ಟಿಪ್ಪುವಿನ ಬಗ್ಗೆ ಬ್ರಿಟೀಷರು ಬರೆದ ಪುಸ್ತಕಗಳನ್ನು ಬಿಜೆಪಿಗರು ಕೊಂಡು ಓದಲಿ. ಅಷ್ಟೂ ಸಾಲದಿದ್ದರೆ ಮೈಸೂರು ಭಾಗದಲ್ಲಿ ಇವತ್ತಿಗೂ ಟಿಪ್ಪುವಿನ ಬಗ್ಗೆ ಜನಪದರು ಕಟ್ಟಿದ ಲಾವಣಿಗಳು ಪ್ರಸ್ತುತವಾಗಿವೆ ಅದನ್ನು ಕೇಳಿಸಿಕೊಳ್ಳುವುದು ಒಳ್ಳೆಯದು’ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯನ್ನು ಪೂಜಿಸುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಬಿಜೆಪಿಗರ ಕಾಯಕವಾಗಿಬಿಟ್ಟಿದೆ. ಬ್ರಿಟೀಷರ ವಿರುದ್ಧ ಹೋರಾಡಿದವರಿಗೆ ಅವಮಾನ, ಬ್ರಿಟೀಷರಿಂದ ಪಿಂಚಣಿ ಪಡೆದವರಿಗೆ ಸನ್ಮಾನ ಇದೇ ಬಿಜೆಪಿಯ ನಿಲುವು’ ಎಂದು ಕಾಂಗ್ರೆಸ್ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮತ್ತೊಂದು ಭೀಕರ ಸರಣಿ ಅಪಘಾತ: 8 ಮಂದಿಯ ದಾರುಣ ಸಾವು
ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ: ಅಪರೂಪದ ಘಟನೆ
ಟ್ವಿಟ್ಟರ್ ನಲ್ಲಿ ಟ್ರೆಂಟ್ ಆದ ‘ರಿಜೆಕ್ಟ್ ಬ್ರಾಹ್ಮಿನ್ ಟೆಕ್ಟ್ಸ್ ಬುಕ್’: ಚಕ್ರತೀರ್ಥ ಹಳೆಯ ಪೋಸ್ಟ್ ವೈರಲ್
ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ತಗಲಿ ಯುವತಿ ಸಾವು