ಬೆಂಬಲಿಗನ ಮೃತದೇಹಕ್ಕೆ ಹೆಗಲು ನೀಡಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ - Mahanayaka
6:59 PM Thursday 12 - December 2024

ಬೆಂಬಲಿಗನ ಮೃತದೇಹಕ್ಕೆ ಹೆಗಲು ನೀಡಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

kim jong un
25/05/2022

ಉತ್ತರಕೊರಿಯಾ: ತನ್ನ ಬೆಂಬಲಿಗನ ಮೃತದೇಹಕ್ಕೆ ಹೆಗಲು ನೀಡುವ ಮೂಲಕ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗಮನ ಸೆಳೆದಿದ್ದು, ಉತ್ತರಕೊರಿಯಾದ ಮಾಧ್ಯಮಗಳು ಈ ಫೋಟೋವನ್ನು ಬಿಡುಗಡೆ ಮಾಡಿವೆ.

ಹಿಯಾನ್ ಚೋಲ್ ಹಿ ಮೃತ ವ್ಯಕ್ತಿಯಾಗಿದ್ದು, ಕಿಮ್ ಜಾಂಗ್ ಉನ್ ಅವರಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಮಾತ್ರವಲ್ಲದೇ ಹಿಯಾನ್ ಚೋಲ್ ನಾರ್ತ್ ಕೊರಿಯಾ ಸೇನೆಯ ಮುಖ್ಯ ಅಧಿಕಾರಿಯೂ ಆಗಿದ್ದರು.

ಉತ್ತರ ಕೊರಿಯಾದಲ್ಲಿ ಕೊರೊನಾ ಭೀತಿಯಿದ್ದು, ಈ ನಡುವೆ ತನ್ನ ಬೆಂಬಲಿಗನ ಶವಯಾತ್ರೆಯಲ್ಲಿ ಕಿಮ್ ಜಾಂಗ್ ಉನ್ ಭಾಗವಹಿಸಿದ್ದಾರೆ. ಮಾತ್ರವಲ್ಲದೇ ಮಾಸ್ಕ್ ಧರಿಸದೆಯೇ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕೂಡ ಚರ್ಚೆಗೀಡಾಗುತ್ತಿದೆ.

ಕಿಮ್ ಜಾಂಗ್ ಉನ್ ಅವರಿಗೆ ಹಿಯಾನ್ ಚೋಲ್ ಹಿ ಅಧಿಕಾರಕ್ಕೇರಲು ಸಹಾಯ ಮಾಡಿದ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅವರ ಮೃತದೇಹಕ್ಕೆ ಹೆಗಲು ನೀಡುವ ಮೂಲಕ ಕಿಮ್ ಜಾಂಗ್ ಉನ್ ಅವರು ಋಣ ತೀರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳಮುಖಿಯರಿಗೆ ಅವಮಾನ: ಸಿಎಂ ಇಬ್ರಾಹಿಂ ವಿರುದ್ಧ ಮಂಜಮ್ಮ ಜೋಗತಿ ತೀವ್ರ ಬೇಸರ

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ನಡೆಸಿ ಹತ್ಯೆ!

ಸಲೂನ್ ಸ್ಪಾದಲ್ಲಿ ವೇಶ್ಯಾವಾಟಿಕೆ: ಮೂವರು ಅಮಾಯಕ ಮಹಿಳೆಯರ ರಕ್ಷಣೆ

ಹಿಂದೂಗಳ ಮೇಲೆ, ರಾಮನ ಮೇಲೆ ನಿಮಗೇಕಿಷ್ಟು ಕೋಪ?: ಕಾಂಗ್ರೆಸ್ ಗೆ ಹಾರ್ದಿಕ್ ಪಟೇಲ್ ಪ್ರಶ್ನೆ

ಅಂಬೇಡ್ಕರ್ ಹೆಸರಿಗೆ ವಿರೋಧ: ಶಾಸಕರ, ಸಚಿವರ ಮನೆಗೆ ಬೆಂಕಿ ಹಚ್ಚಿದ ದೇಶದ್ರೋಹಿಗಳು

 

 

ಇತ್ತೀಚಿನ ಸುದ್ದಿ