ಮಂಗಳಮುಖಿಯರಿಗೆ ಅವಮಾನ: ಸಿಎಂ ಇಬ್ರಾಹಿಂ ವಿರುದ್ಧ ಮಂಜಮ್ಮ ಜೋಗತಿ ತೀವ್ರ ಬೇಸರ - Mahanayaka
7:15 PM Thursday 12 - December 2024

ಮಂಗಳಮುಖಿಯರಿಗೆ ಅವಮಾನ: ಸಿಎಂ ಇಬ್ರಾಹಿಂ ವಿರುದ್ಧ ಮಂಜಮ್ಮ ಜೋಗತಿ ತೀವ್ರ ಬೇಸರ

cm ibrahim
25/05/2022

ಬೆಂಗಳೂರು:  ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ ಎಂಬ ಹೇಳಿಕೆಯನ್ನು ನೀಡಿರುವ ಸಿಎಂ ಇಬ್ರಾಹಿಂ, ದೊಡ್ಡವರೆಲ್ಲ ಜಾಣರಲ್ಲ  ಅನ್ನೋದನ್ನು ನಿರೂಪಿಸಿದ್ದು, ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ.’

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ನನ್ನ ತಂದೆ ಕೂಡ ಹೀಗೆ ಹೇಳಿದ್ದರು- ಗಂಡಾಗಿದ್ದರೆ ಕೆಲಸ ಕೊಡಿಸುತ್ತಿದ್ದೆ, ಹೆಣ್ಣಾಗಿದ್ದರೆ ಮದುವೆ ಮಾಡಿಸುತ್ತಿದ್ದೆ, ಕುರುಡ ಕುಂಟ ಆಗಿದ್ದರೆ ಮನೆಯಲ್ಲೇ ಇರಿಸಿಕೊಂಡು ಊಟ ಹಾಕುತ್ತಿದ್ದೆ.

ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮ್ಮನ್ನು. ಹೀಗೆ ಅವಮಾನ ಮಾಡಬಾರದಿತ್ತು ಸರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು! ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಸಿಎಂ ಇಬ್ರಾಹಿಂ,  ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ, ಮಂಗಳಮುಖಿ ಸರ್ಕಾರ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ಈ ಮಂಗಳಮುಖಿ ಸರ್ಕಾರದಿಂದ ಮುಕ್ತಿಪಡೆಯೋಣ. ಇವರ ಜತೆ ಜಗಳ ಆಡುವುದಕ್ಕೂ ಆಗಲ್ಲ, ಗಂಡಸರಾದರೆ ಗಂಡಸರನ್ನು ಕಳುಹಿಸಬಹುದು ಹೆಂಗಸರಾದರೆ ಹೆಂಗಸರನ್ನು ಕಳುಹಿಸಬಹುದು. ಇದು ಗಂಡಸೂ ಅಲ್ಲ ಹೆಂಗಸೂ ಅಲ್ಲ, ಕೈ ತಟ್ಟುತ್ತಾರೆ. ನಾವು ಹಿಂದೆ ಸರಿಯಬೇಕಾಗುತ್ತದೆ. ಎಷ್ಟು ಬೈದರೂ ಎಷ್ಟು ಉಗಿದರೂ ಹ್ಹಿ ಹ್ಹಿ ಹ್ಹೀ ಅಂತಾರೆ ಎಂದಿದ್ದರು.

ಇಷ್ಟೊಂದು ಸೀನಿಯರ್ ಆಗಿರುವ ಇಬ್ರಾಹಿಂ, ಊರಿಗೆ ಬುದ್ಧಿ ಹೇಳಿ ತನ್ನನ್ನು ಮಾತ್ರ ಸರಿಪಡಿಸಿಕೊಳ್ಳದಿರುವುದು ದುರಂತವೇ ಸರಿ. ಇನ್ನೊಬ್ಬರನ್ನು ಹೋಲಿಸಿ ಮಾತನಾಡಿ, ಅಮಾಯಕರಿಗೆ ದುರ್ಬಲರಿಗೆ ಅವಮಾನ ಮಾಡುವ ದುರ್ಬುದ್ಧಿ ಯಾವಾಗ ಬಿಡುತ್ತಾರೋ  ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ನಡೆಸಿ ಹತ್ಯೆ!

ಸಲೂನ್ ಸ್ಪಾದಲ್ಲಿ ವೇಶ್ಯಾವಾಟಿಕೆ: ಮೂವರು ಅಮಾಯಕ ಮಹಿಳೆಯರ ರಕ್ಷಣೆ

ಹಿಂದೂಗಳ ಮೇಲೆ, ರಾಮನ ಮೇಲೆ ನಿಮಗೇಕಿಷ್ಟು ಕೋಪ?: ಕಾಂಗ್ರೆಸ್ ಗೆ ಹಾರ್ದಿಕ್ ಪಟೇಲ್ ಪ್ರಶ್ನೆ

ಅಂಬೇಡ್ಕರ್ ಹೆಸರಿಗೆ ವಿರೋಧ: ಶಾಸಕರ, ಸಚಿವರ ಮನೆಗೆ ಬೆಂಕಿ ಹಚ್ಚಿದ ದೇಶದ್ರೋಹಿಗಳು

ಪತ್ನಿಗಾಗಿ 90 ಸಾವಿರ ರೂಪಾಯಿಯ ಮೊಪೆಡ್ ಖರೀದಿಸಿದ ಭಿಕ್ಷುಕ!

 

 

ಇತ್ತೀಚಿನ ಸುದ್ದಿ