ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಯುವಕ: 21 ವಿದ್ಯಾರ್ಥಿಗಳು ಸಾವು - Mahanayaka
7:10 PM Thursday 12 - December 2024

ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಯುವಕ: 21 ವಿದ್ಯಾರ್ಥಿಗಳು ಸಾವು

fireing
25/05/2022

ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ ವಯಸ್ಸಿನ ಯುವಕನೋರ್ವ ಅಮಾನವೀಯವಾಗಿ ಗುಂಡಿನ ದಾಳಿ ನಡೆಸಿದ್ದು, ಈ ಗುಂಡಿನ ದಾಳಿಯಲ್ಲಿ 18 ಮಂದಿ ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ.

ಸಾಲ್ವಡಾರ್ ರಾಮೋಸ್ ಎಂದು ಗುರುತಿಸಲಾದ 18 ವರ್ಷದ ಬಂದೂಕು ಧಾರಿಯು ಮಂಗಳವಾರ ರಾಜ್ ಎಲಿಮೆಂಟರಿ ಶಾಲೆಗೆ ನುಗ್ಗಿ ಭೀಕರ ದಾಳಿ ನಡೆಸಿದ್ದಾನೆ. ದಾಳಿಕೋರನು ಸಮೀಪದ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದ್ದ.

2012ರಲ್ಲಿ ಕನೆಕ್ಟಿಕಟ್‌ ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಅತಿ ಭೀಕರ ದಾಳಿ ಇದಾಗಿದೆ.

ಶಾಲೆಗೆ ತೆರಳುವುದಕ್ಕೂ ಮುನ್ನ ದಾಳಿಕೋರ ಆತ ಅಜ್ಜಿಯೊಬ್ಬರ ಮೇಲೂ ಗುಂಡು ಹಾರಿಸಿದ್ದು, ಆಕೆಯ ಸ್ಥಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಆ ಬಳಿಕ ವಾಹನದಲ್ಲಿ ಬಂದು ಕ್ಯಾಶ್ ಮಾಡಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ಈತ ದೇಹಕ್ಕೆ ರಕ್ಷಾಕವಚಧರಿಸಿದ್ದು, ರೈಫಲ್ ಮತ್ತು ಬ್ಯಾಕ್ ‘ಪ್ಯಾ ಹೊಂದಿದ್ದ. ರಕ್ಷಣೆಗೆ ಧಾವಿಸಿದ ಪೊಲೀಸರ ಮೇಲು ಗುಂಡು ಹಾರಿಸಿದ್ದು, ಪೊಲೀಸರ ಎನ್ ಕೌಂಟರ್ ನಲ್ಲಿ ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಟೆಕ್ಸಾಸ್ ಶಾಲೆಯ ಗುಂಡಿನ ದಾಳಿಗೆ ಬಲಿಯಾದವರಿಗೆ ಗೌರವಾರ್ಥವಾಗಿ ಶನಿವಾರದವರೆಗೆ ಶ್ವೇತಭವನ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಂಬಲಿಗನ ಮೃತದೇಹಕ್ಕೆ ಹೆಗಲು ನೀಡಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಮಂಗಳಮುಖಿಯರಿಗೆ ಅವಮಾನ: ಸಿಎಂ ಇಬ್ರಾಹಿಂ ವಿರುದ್ಧ ಮಂಜಮ್ಮ ಜೋಗತಿ ತೀವ್ರ ಬೇಸರ

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ನಡೆಸಿ ಹತ್ಯೆ!

ಸಲೂನ್ ಸ್ಪಾದಲ್ಲಿ ವೇಶ್ಯಾವಾಟಿಕೆ: ಮೂವರು ಅಮಾಯಕ ಮಹಿಳೆಯರ ರಕ್ಷಣೆ

ಹಿಂದೂಗಳ ಮೇಲೆ, ರಾಮನ ಮೇಲೆ ನಿಮಗೇಕಿಷ್ಟು ಕೋಪ?: ಕಾಂಗ್ರೆಸ್ ಗೆ ಹಾರ್ದಿಕ್ ಪಟೇಲ್ ಪ್ರಶ್ನೆ

 

ಇತ್ತೀಚಿನ ಸುದ್ದಿ