ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಟೈರ್ ಸ್ಫೋಟ
ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಟೈರ್ ಸ್ಫೋಟಗೊಂಡಿದೆ. ಕೋಝಿಕ್ಕೋಡ್-ರಿಯಾದ್ ಸೆಕ್ಟರ್ ನಲ್ಲಿರುವ IX 1321 ವಿಮಾನದ ಟೈರ್ ರಿಯಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಗೊಂಡಿದೆ.
ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಡ ಭಾಗದ ಟೈರ್ ಸ್ಫೋಟಗೊಂಡಿದ್ದು, ಈ ವಿಮಾನ ರಾತ್ರಿ 11:45ಕ್ಕೆ ರಿಯಾದ್ ನಿಂದ ಕೋಝಿಕ್ಕೋಡ್‌ಗೆ ಹಿಂತಿರುಗ ಬೇಕಾಗಿತ್ತು. ವಿಮಾನದ ಎಡ ಟೈರ್ ಚಪ್ಪಟೆಯಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ವಿಮಾನವನ್ನು ರನ್ ವೇಯಲ್ಲಿ ನಿಲ್ಲಿಸಿ ನಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ತಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಜಿನ್ನಾ ಟವರ್ ಗೆ ಎಪಿಜೆ ಅಬ್ದುಲ್ ಕಲಾಂ ಹೆಸರಿಡಲು ಬಿಜೆಪಿ ಆಗ್ರಹ
ಸಕ್ಕರೆ ರಫ್ತಿಗೆ ಕೇಂದ್ರ ನಿರ್ಬಂಧ: ಹಣದುಬ್ಬರ ನಿಯಂತ್ರಣಕ್ಕೆ ಕ್ರಮ
ಸ್ಪೈಸ್ ಜೆಟ್ ಮೇಲೆ ವೈರಸ್ ದಾಳಿ: ಹಲವಾರು ವಿಮಾನಗಳು ಸ್ಥಗಿತ
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ನಿಧನ
ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಯುವಕ: 21 ವಿದ್ಯಾರ್ಥಿಗಳು ಸಾವು