ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 11 ನವಜಾತ ಶಿಶುಗಳು ಸಜೀವ ದಹನ - Mahanayaka

ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 11 ನವಜಾತ ಶಿಶುಗಳು ಸಜೀವ ದಹನ

senegal hospital
26/05/2022

ಸೆನೆಗಲ್:  ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ಪರಿಣಾಮ 11 ನವಜಾತ ಶಿಶುಗಳು ಸಜೀವ ದಹನವಾದ ಘಟನೆ  ಸೆನೆಗಲ್ ನ ಟಿವಾವೋನ್ ಆಸ್ಪತ್ರೆಯಲ್ಲಿ ನಡೆದಿದೆ.

ಘಟನೆಯನ್ನು ಅಧ್ಯಕ್ಷ ಮ್ಯಾಕಿ ಸಾಲ್ ದೃಢಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ  11 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ತೀವ್ರ ದುಃಖ ವ್ಯಕ್ತಪಡಿಸುತ್ತಿದ್ದೇನೆಂದು ಅವರು ಟ್ವೀಟ್ ಮಾಡಿದ್ದಾರೆ.

ಇಲ್ಲಿನ ಮೇಮ್ ಅಬ್ದು ಅಝೀಝ್ ಸೈ ದಬೆಕ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು,  ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು  ಸೆನೆಗಲ್ ಪೊಲೀಸರು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಟ್ಟಡವನ್ನು ವ್ಯಾಪಿಸಿತು ಎಂದು  ಹೇಳಿದ್ದಾರೆ.

ಘಟನೆಯ ವೇಳೆ ಮೂರು ಶಿಶುಗಳನ್ನು ರಕ್ಷಿಸಲಾಗಿದೆ ಎಂದು ಇಲ್ಲಿನ ಮೇಯರ್ ದೆಂಬಾ ದಿಯೋಪ್ ತಿಳಿಸಿದ್ದಾರೆ. ಅಂದ ಹಾಗೆ ದುರಂತಕ್ಕೀಡಾದ ಆಸ್ಪತ್ರೆ ಇತ್ತೀಚೆಗಷ್ಟೇ  ಉದ್ಘಾಟನೆಗೊಂಡಿತ್ತು ಎನ್ನಲಾಗಿದೆ. ಉದ್ಘಾಟನೆಗೊಂಡು ಕೆಲವೇ ಸಮಯದಲ್ಲಿ ಇಂತಹದ್ದೊಂದು ದುರಂತ ನಡೆದು ಹೋಗಿದ್ದು, ಇನ್ನೂ ಪ್ರಪಂಚವನ್ನು ಕಾಣದ ಎಳೆಯ ಮಕ್ಕಳು ಬೆಂಕಿಯಲ್ಲಿ ಬೆಂದು ಪ್ರಾಣ ಬಿಟ್ಟಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಸೀದಿಯಲ್ಲಿ ದೈವ ಸಾನಿಧ್ಯ ಇತ್ತು: ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್

ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಟೈರ್ ಸ್ಫೋಟ

ಸಕ್ಕರೆ ರಫ್ತಿಗೆ ಕೇಂದ್ರ ನಿರ್ಬಂಧ:  ಹಣದುಬ್ಬರ ನಿಯಂತ್ರಣಕ್ಕೆ ಕ್ರಮ

ಸ್ಪೈಸ್ ಜೆಟ್ ಮೇಲೆ ವೈರಸ್ ದಾಳಿ:  ಹಲವಾರು ವಿಮಾನಗಳು ಸ್ಥಗಿತ

ಹಿಂದೂಗಳ ಮೇಲೆ, ರಾಮನ ಮೇಲೆ ನಿಮಗೇಕಿಷ್ಟು ಕೋಪ?: ಕಾಂಗ್ರೆಸ್ ಗೆ ಹಾರ್ದಿಕ್ ಪಟೇಲ್ ಪ್ರಶ್ನೆ

ಇತ್ತೀಚಿನ ಸುದ್ದಿ