ಎಲ್ಲ ಮಸೀದಿ ಅಗೆಯೋಣ, ಶಿವಲಿಂಗ ಸಿಕ್ಕರೆ ನಮ್ಮದು, ಹೆಣ ಸಿಕ್ಕರೆ ನಿಮ್ಮದು: ಬಿಜೆಪಿ ಮುಖಂಡನ ಹೇಳಿಕೆ!
ಹೈದರಾಬಾದ್: ತೆಲಂಗಾಣದಲ್ಲಿರುವ ಎಲ್ಲ ಮಸೀದಿಗಳಲ್ಲಿಯೂ ಉತ್ಖನನ ನಡೆಸಬೇಕು. ಶಿವಲಿಂಗ ಪತ್ತೆಯಾದರೆ ಮಸೀದಿ ಹಿಂದೂಗಳಿಗೆ ಬಿಟ್ಟುಕೊಡಬೇಕು. ಮೃತದೇಹ ಪತ್ತೆಯಾದರೆ ಮುಸ್ಲಿಮರು ತೆಗೆದುಕೊಳ್ಳಬಹುದು ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕಿಡಿಕಾರಿದ ಅವರು, ರಾಜ್ಯದಲ್ಲಿನ ಎಲ್ಲ ಮಸೀದಿಗಳನ್ನೂ ನಾವು ಅಗೆಯುತ್ತೇವೆ ಎಂದು ನಾನು ಓವೈಸಿ ಅವರಿಗೆ ಸವಾಲು ಹಾಕುತ್ತೇನೆ. ಒಂದು ವೇಳೆ ಮೃತದೇಹಗಳು ಅಲ್ಲಿ ಸಿಕ್ಕರೆ, ನೀವು (ಮುಸ್ಲಿಂ) ಅದು ತಮ್ಮದೆಂದು ಪ್ರತಿಪಾದಿಸಿ. ಒಂದು ವೇಳೆ ಶಿವಲಿಂಗ ದೊರೆತರೆ, ಅದನ್ನು ನಮಗೆ ಒಪ್ಪಿಸಿ. ಇದನ್ನು ನೀವು ಒಪ್ಪುತ್ತೀರಾ? ಎಂದು ಪ್ರಶ್ನಿಸಿದರು.
ವಾರಾಣಸಿಯಲ್ಲಿನ ಜ್ಞಾನವಾಪಿ ಮಸೀದಿ ಒಳಭಾಗದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಹೇಳಿಕೆ ಸಂಚಲನ ಮೂಡಿಸಿರುವ ಸಂದರ್ಭದಲ್ಲಿ, ಓವೈಸಿ ಅವರ ಹೇಳಿಕೆಗೆ ಬಿಜೆಪಿ ನಾಯಕ ತಿರುಗೇಟು ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆರೆಸ್ಸೆಸ್, ಬಿಜೆಪಿ ಮೊದಲು ಕೈ ಹಾಕುವುದು ಶಿಕ್ಷಣ, ಇತಿಹಾಸದ ಕುತ್ತಿಗೆಗೆ: ದೇವನೂರು ಮಹದೇವ
ಮಹಿಳೆಯನ್ನು ಇರಿದು ಕೊಂದ ಕುರಿಗೆ ಮೂರು ವರ್ಷಗಳ ಜೈಲು ಶಿಕ್ಷೆ!
ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 11 ನವಜಾತ ಶಿಶುಗಳು ಸಜೀವ ದಹನ
ಮಸೀದಿಯಲ್ಲಿ ದೈವ ಸಾನಿಧ್ಯ ಇತ್ತು: ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್