ಉಗ್ರರ ಗುಂಡಿಗೆ ಬಲಿಯಾದ ಟಿಕ್ ಟಾಕ್ ಸ್ಟಾರ್ ಅಮರೀನ್ ಭಟ್!
ಜಮ್ಮು ಕಾಶ್ಮೀರದ ಬುದ್ಗಾಮ್ ಗ್ರಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಖ್ಯಾತ ಟಿಕ್ ಟಾಕ್-ಟಿವಿ ತಾರೆಯನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.
35 ವರ್ಷದ ಅಮರೀನ್ ಭಟ್ ಕೊಲೆಯಾದ ಮಹಿಳೆ. ಆಕೆಯ ಸಂಬಂಧಿ 10 ವರ್ಷದ ಬಾಲಕಿಗೂ ಗಂಭೀರವಾಗಿ ಗಾಯವಾಗಿದ್ದು, ಬುಧವಾರ ರಾತ್ರಿ 7:55ರ ಸುಮಾರಿಗೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಷ್ಕರ್ ಎ ತೊಯ್ಬಾ ಉಗ್ರರು ಮನೆಗೆ ನುಗ್ಗಿ ಅಮ್ರೀನ್ ಭಟ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಹಿಂದಿನ ದಿನ ನಡೆದ ಭಯೋತ್ಪಾದಕರ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದರು. ರಕ್ಷಣೆಗೆ ಧಾವಿಸಿದ ಅವರ ಮಗಳೂ ಗಾಯಗೊಂಡಿದ್ದಾರೆ. ಭಯೋತ್ಪಾದಕರ ಸರಣಿ ದಾಳಿಯ ನಂತರ ಬುದ್ಗಾಮ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವೇಶ್ಯಾವಾಟಿಕೆ ಕಾನೂನುಬದ್ಧ ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ: ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮೆಕ್ ಡೊನಾಲ್ಡ್ಸ್ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆ: ಹೊಟೇಲ್ ಗೆ ಬೀಗ
ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಎಲ್ಲ ಮಸೀದಿ ಅಗೆಯೋಣ, ಶಿವಲಿಂಗ ಸಿಕ್ಕರೆ ನಮ್ಮದು, ಹೆಣ ಸಿಕ್ಕರೆ ನಿಮ್ಮದು: ಬಿಜೆಪಿ ಮುಖಂಡನ ಹೇಳಿಕೆ!