ಜೀವನದಲ್ಲಿ ಜಿಗುಪ್ಸೆ: ದುಡುಕಿನ ನಿರ್ಧಾರ ತೆಗೆದುಕೊಂಡ ದಂಪತಿ!
ದಾವಣಗೆರೆ : ಜೀವನದಲ್ಲಿ ಜಿಗುಪ್ಸೆಗೊಂಡ ದಂಪತಿಗಳು ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ಬಳಿ ನಡೆದಿದೆ.
ಮೃತ ದಂಪತಿಗಳು ಹರಿಹರ ತಾಲೂಕಿನ ಸಂಕ್ಲಿಪುರದ ನಿವಾಸಿಗಳಾದ ಮಠದ ಚೆನ್ನಪ್ಪಸ್ವಾಮಿ(45), ವನಜಾಕ್ಷಮ್ಮ(37) ಎಂದು ಗುರುತಿಸಲಾಗಿದೆ.
ಪಿಕಪ್ ಡ್ಯಾಂ ನಲ್ಲಿ ಚೆನ್ನಪ್ಪಸ್ವಾಮಿ ದಂಪತಿಯ ಮೃತದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು, ಬಳಿಕ ಇಬ್ಬರ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆದಿದ್ದಾರೆ.
ಜೀವನದಲ್ಲಿ ಜಿಗುಪ್ಸೆಗೊಂಡು ಇವರು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗ್ತಿದೆ. ಆದರೆ ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ.ಪ್ರಕರಣ ಸಂಬಂಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬ್ಲಡ್ ಬ್ಯಾಂಕ್ ನಿಂದ ರಕ್ತ ಪಡೆದ ನಾಲ್ಕು ಮಕ್ಕಳಿಗೆ ಎಚ್ ಐವಿ: ಒಂದು ಮಗು ಸಾವು
ಪರಮಾಣು ಬಾಂಬ್ ನಿಂದ ಮಾತ್ರ ಹೊಸ ಸ್ಕಾರ್ಪಿಯೋವನ್ನು ನಾಶ ಮಾಡಲು ಸಾಧ್ಯ: ಆನಂದ್ ಮಹೀಂದ್ರ
ಇಂದಿರಾ ಕ್ಯಾಂಟೀನ್ ನ್ನು ಇಸ್ಕಾನ್ ಸಂಸ್ಥೆಗೆ ವಹಿಸಿದ ರಾಜ್ಯ ಸರ್ಕಾರ!
ಉಗ್ರರ ಗುಂಡಿಗೆ ಬಲಿಯಾದ ಟಿಕ್ ಟಾಕ್ ಸ್ಟಾರ್ ಅಮರೀನ್ ಭಟ್!