ಟಿಪ್ಪು ಅರಮನೆಯನ್ನು ನಿರ್ಮಿಸಿದ್ದು ದೇವಾಲಯದ ಭೂಮಿಯಲ್ಲಿ: ಹಿಂದೂ ಜನಜಾಗೃತಿ ಸಮಿತಿ - Mahanayaka
10:16 PM Thursday 17 - October 2024

ಟಿಪ್ಪು ಅರಮನೆಯನ್ನು ನಿರ್ಮಿಸಿದ್ದು ದೇವಾಲಯದ ಭೂಮಿಯಲ್ಲಿ: ಹಿಂದೂ ಜನಜಾಗೃತಿ ಸಮಿತಿ

tippu aramane
27/05/2022

ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನ್ ಅರಮನೆಯನ್ನು ದೇವಸ್ಥಾನದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್) ಆರೋಪಿಸಿದೆ.

ಅರಮನೆಯನ್ನು ಸಮೀಕ್ಷೆ ನಡೆಸಬೇಕು ಎಂದು ಸಮಿತಿ ಆಗ್ರಹಿಸಿದ್ದು,  ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಕುತುಬ್ ಮಿನಾರ್ ಬಳಿಕ ಹಿಂದುತ್ವವಾದಿಗಳು ಕರ್ನಾಟಕದಲ್ಲೂ ಐತಿಹಾಸಿಕ ಸ್ಥಳಗಳ ವಿರುದ್ಧವೂ ಆರೋಪ ಆರಂಭಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಅವರು, ಬೆಂಗಳೂರಿನ ಟಿಪ್ಪು ಸುಲ್ತಾನ್ ಅರಮನೆಯನ್ನು ದೇವಸ್ಥಾನದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದಾರೆ.  ಟಿಪ್ಪು ಸುಲ್ತಾನನ ಅರಮನೆಯ ಸ್ಥಳವು ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಸೇರಿದ್ದು,  ದೇವಾಲಯವನ್ನು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು  ಹೇಳಿದ್ದಾರೆ.

ದೇವಾಲಯದಲ್ಲಿ ವೇದಗಳನ್ನು ಕಲಿಸಲಾಗುತ್ತಿತ್ತು. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಭೂಮಿಯನ್ನು ಸರ್ವೆ ಮಾಡಿ ಮೂಲ ಮಾಲೀಕರಿಗೆ ಹಸ್ತಾಂತರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಂದು ವರ್ಷದ ಮಗುವನ್ನು ಚರ್ಚ್ ನಲ್ಲಿ ಮಲಗಿಸಿ ಪರಾರಿಯಾದ ಪೋಷಕರು!

ಹವಾಮಾನ ವೈಪರೀತ್ಯದಿಂದ ಜನರು ನಿದ್ರೆಯನ್ನು ಕಳೆದುಕೊಳ್ಳಲಿದ್ದಾರೆ!

ಪತ್ನಿಗಾಗಿ 90 ಸಾವಿರ ರೂಪಾಯಿಯ ಮೊಪೆಡ್ ಖರೀದಿಸಿದ ಭಿಕ್ಷುಕ!

ಕ್ರೀಮ್ ಬನ್ ನಲ್ಲಿ ಕ್ರೀಮ್ ಇಲ್ಲ, ಟೀಯಲ್ಲಿ ಬಿಸಿ ಇಲ್ಲ ಎಂದು ಜಗಳ: ಬೇಕರಿ ಮಾಲಿಕನಿಗೆ ದುಷ್ಕರ್ಮಿಗಳಿಂದ ಹಿಗ್ಗಾಮುಗ್ಗಾ ಥಳಿತ

ಜೀವನದಲ್ಲಿ ಜಿಗುಪ್ಸೆ: ದುಡುಕಿನ ನಿರ್ಧಾರ ತೆಗೆದುಕೊಂಡ ದಂಪತಿ!

 

ಇತ್ತೀಚಿನ ಸುದ್ದಿ