ದಲಿತ ಯುವಕನನ್ನು ಸರಪಳಿಯಿಂದ ಬಂಧಿಸಿ ಅಮಾನುಷ ಹಲ್ಲೆ
![jaipura](https://www.mahanayaka.in/wp-content/uploads/2022/05/jaipura.jpg)
ಜೈಪುರ: ಸಾಲ ಮರುಪಾವತಿ ಮಾಡುವಂತೆ ದಲಿತ ಯುವಕನನ್ನು ಸರಪಳಿಯಲ್ಲಿ ಬಿಗಿದು ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.
ರಾಧೇಶ್ಯಾಂ ಮೇಘವಾಲ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಭೂಮಾಲಿಕ ಪರಮಜಿತ್ ಸಿಂಗ್ ಹಾಗೂ ಇತರ ನಾಲ್ಕು ಮಂದಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಇವರ ವಿರುದ್ಧ ದೂರು ದಾಖಲಿಸಲಾಗಿದೆ.
3 ವರ್ಷಗಳ ಹಿಂದೆ ರಾಧೇಶ್ಯಾಂ ಅವರನ್ನು ಒಂದು ವರ್ಷಕ್ಕೆ 70 ಸಾವಿರ ರೂಪಾಯಿ ಸಂಬಂಳಕ್ಕಾಗಿ ಸಿಂಗ್ ಕೂಲಿಗೆ ನೇಮಕ ಮಾಡಿಕೊಂಡಿದ್ದ. ಸಹೋದರಿಯ ಮದುವೆಗಾಗಿ ಆ ಬಳಿಕ 30 ಸಾವಿರ ರೂಪಾಯಿ ಸಾಲವನ್ನೂ ಪಡೆದುಕೊಂಡಿದ್ದ.
ಇದಾದ ಬಳಿಕ ಆರು ತಿಂಗಳ ಕಾಲ ರಾಧೇಶ್ಯಾಂ ಅವರನ್ನು 24 ಗಂಟೆಗಳ ಕಾಲ ಸಿಂಗ್ ದುಡಿಸಲು ಆರಂಭಿಸಿದ್ದ. ಇದರಿಂದಾಗಿ ಅನಾರೋಗ್ಯಕ್ಕೀಡಾಗ ಅಸ್ವಸ್ಥರಾದ ರಾಧೇಶ್ಯಾಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದಾದ ಬಳಿಕ ಸಿಂಗ್ ಗೆ 25 ಸಾವಿರ ರೂ. ವಾಪಸ್ ನೀಡಿ ಕೆಲಸ ಬಿಟ್ಟಿದ್ದರು. ಆದರೆ, ಸಿಂಗ್ ಮತ್ತು ಸಹಚರರು ಗ್ರಾಮದಿಂದ ಬಲವಂತವಾಗಿ ಕರೆದುಕೊಂಡು ಹೋಗಿ 10 ದಿನಗಳ ಕಾಲ ಕೊಯ್ಲು ಮಾಡಿಸಿದ್ದಾರೆ. ಇದಾದ ಬಳಿಕ ಮತ್ತೆ ಮನೆಗೆ ಬಂದಿದ್ದ ರಾಧೇಶ್ಯಾಂ ಅವರನ್ನು ಮತ್ತೊಮ್ಮೆ ಎಳೆದೊಯ್ದು ಕೊಟ್ಟಿಗೆಯಲ್ಲಿ ಸರಪಳಿಯಿಂದ ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆರೆಸ್ಸೆಸ್ ನವರು ಭಾರತೀಯರಾ? ದ್ರಾವಿಡರಾ?: ಸಿದ್ದರಾಮಯ್ಯ ಪ್ರಶ್ನೆ
ಸ್ಟೇಡಿಯಂನಲ್ಲಿ ನಾಯಿ ಜೊತೆ ವಾಕಿಂಗ್ ಮಾಡಿದ್ದ ಐಎಎಸ್ ಅಧಿಕಾರಿ ದಂಪತಿ ವರ್ಗಾವಣೆ
ಸೇನೆಯ ವಾಹನ ನದಿಗೆ ಉರುಳಿ 7 ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯ
ಮೂತ್ರದಿಂದ ತಯಾರಾಗುವ ಬಿಯರ್: ಸೂಪರ್ ಟೇಸ್ಟ್ ಎನ್ನುತ್ತಿದ್ದಾರೆ ಮದ್ಯಪಾನಿಗಳು!