ಬಾವಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು! - Mahanayaka
9:17 PM Wednesday 5 - February 2025

ಬಾವಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು!

bavi
28/05/2022

ಬಂಟ್ವಾಳ:  ಬಾವಿ ಕಾಣೆಯಾಗಿದೆ, ಹುಡುಕಿ ಕೊಡಿ ಎಂದು ಪಿಡಿಓ ಒಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದದಲ್ಲಿ ನಡೆದಿದೆ.

ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಬಾವಿ ಕಾಣೆಯಾಗಿದ್ದು, ಇದನ್ನು ಹುಡುಕಿಕೊಡುವಂತೆ ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಗೊಂಡಪ್ಪ ಬಿರಾದರ್ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನರಿಕೊಂಬು ಗ್ರಾಮದ ನೇಲ್ಯಡ್ಕ ನಿವಾಸಿ ದಯಾನಂದ ಪೂಜಾರಿ ಅವರು ಬಾವಿ ಮುಚ್ಚಿದ್ದಾರೆ ಎಂದು ಪೊಲೀಸ್ ಠಾಣೆಗೆ ಪಿಡಿಒ ದೂರು ನೀಡಿದ್ದು,  ನರಿಕೊಂಬು ಗ್ರಾಮ  ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2012-13ನೇ ಸಾಲಿನಲ್ಲಿ ಸಾರ್ವಜನಿಕವಾಗಿ ತೆರೆದ ಬಾವಿಯನ್ನು ರೂ.73,305/- ಅನುದಾನದಲ್ಲಿ ಮಾಡಲಾಗಿತ್ತು.

ಪ್ರಸ್ತುತ ತೆರೆದ ಸಾರ್ವಜನಿಕ ಬಾವಿಯನ್ನು ಸ್ಥಳೀಯ ದಯಾನಂದ ಪೂಜಾರಿರವರು ಕಾನೂನು ಬಾಹಿರವಾಗಿ ಸಂಪೂರ್ಣವಾಗಿ ಮುಚ್ಚಿ ಬಾವಿಯ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತಾರೆ. ಆದ್ದರಿಂದ ಬಾವಿಯನ್ನು ಮುಚ್ಚಿ ಸರಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿದ ದಯಾನಂದ ಪೂಜಾರಿಯವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಠಿಣ ಶಿಕ್ಷೆ ಕೊಡಿಸುತ್ತೇವೆ: ಸಚಿವ ಮುರುಗೇಶ್ ನಿರಾಣಿ

ಬಡ ಎಸ್ಸಿ-ಎಸ್ ಟಿ ಕುಟುಂಬಗಳಿಗೆ ಉಚಿತ ವಿದ್ಯುತ್: ಬಿಜೆಪಿ ಸರ್ಕಾರ ಆದೇಶ

ದಲಿತ ಯುವಕನನ್ನು ಸರಪಳಿಯಿಂದ ಬಂಧಿಸಿ ಅಮಾನುಷ ಹಲ್ಲೆ

ಆರೆಸ್ಸೆಸ್ ನವರು ಭಾರತೀಯರಾ? ದ್ರಾವಿಡರಾ?: ಸಿದ್ದರಾಮಯ್ಯ ಪ್ರಶ್ನೆ

ಇತ್ತೀಚಿನ ಸುದ್ದಿ