ಕಾಂಗ್ರೆಸ್ ಪಕ್ಷ ತೊರೆದ ನಟ ಮುಖ್ಯಮಂತ್ರಿ ಚಂದ್ರು: ಕಾರಣ ಏನು? - Mahanayaka
12:10 AM Wednesday 11 - December 2024

ಕಾಂಗ್ರೆಸ್ ಪಕ್ಷ ತೊರೆದ ನಟ ಮುಖ್ಯಮಂತ್ರಿ ಚಂದ್ರು: ಕಾರಣ ಏನು?

mukhyamanthri chandru
29/05/2022

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಚಂದ್ರು ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದು, ಈ ಕುರಿತಂತೆ ಪತ್ರ ರವಾನಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಕ ನೆಲೆಯಲ್ಲಿ ಜನಸೇವೆ ಮಾಡುವ ಆಶಯದಿಂದ ಸೇರ್ಪಡೆಯಾಗಿದ್ದೆ. ಅಂದಿನಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿಯಿದೆ. ಸದ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪಕ್ಷದ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಪ್ರಕಟಿಸಿರುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಎಂಎಲ್‌ ಸಿ ಅಥವಾ ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ಮುಖಂಡ ಚಂದ್ರು ಅವರನ್ನು ಪರಿಗಣಿಸದೇ ಇರೋದು ಹಾಗೂ ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ರೂ ಗುರುತಿಸಲಿಲ್ಲ ಎಂಬ ಬೇಸರದಿಂದ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಹಿಳೆಯರು ರಾತ್ರಿ ಪಾಳಿಯಲ್ಲಿ  ಕೆಲಸ ಮಾಡುವಂತಿಲ್ಲ: ಯೋಗಿ ಸರ್ಕಾರದಿಂದ ಖಡಕ್ ಆದೇಶ

ಜಾತ್ರೆಯಲ್ಲಿ ಪಾನಿಪುರಿ ಸೇವಿಸಿದ 97 ಮಕ್ಕಳು ಅಸ್ವಸ್ಥ

ತ್ಯಾಜ್ಯ ವಸ್ತುಗಳಿಂದ ತಲೆಯೆತ್ತಿದ ದೈತ್ಯ ರಾಜಹಂಸ ಪ್ರತಿಮೆ!

ಕೆಜಿಎಫ್ ಚಿತ್ರದ ಪ್ರಭಾವದಿಂದ ಸಿಗರೇಟ್ ಸೇದಿದ ಬಾಲಕ ಅಸ್ವಸ್ಥ

ಇತ್ತೀಚಿನ ಸುದ್ದಿ