ಕಾಂಗ್ರೆಸ್ ಕಮ್ಯುನಿಸ್ಟರನ್ನು ಕೆರಳಿಸಿದ ಎಸ್ ಡಿಪಿಐ ಮುಖಂಡ ಇಲ್ಯಾಸ್ ಹೇಳಿಕೆ
ಮಂಗಳೂರು: ರಾಹುಲ್ ಗಾಂಧಿಯವರೇ ನಿಮ್ಮ ಅಜ್ಜಿಯಾದ ಇಂದಿರಾ ಗಾಂಧಿಯವರು, ನಿಮ್ಮ ತಂದೆಯಾದ ರಾಜೀವ್ ಗಾಂಧಿಯವರು ಅದಕ್ಕಿಂತ ಮೊದಲು ಜವಹಾರ್ ಲಾಲ್ ನೆಹರೂ ಅವರು ಎಲ್ಲರೂ ಕೂಡ ದೇಶವನ್ನು ಮಾರಿದವರು ಎಂಬ ಎಸ್ ಡಿಪಿಐ ಮುಖಂಡ ಇಲ್ಯಾಸ್ ಮಹಮ್ಮದ್ ತುಂಬೆ ಅವರ ಹೇಳಿಕೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.
ಮಂಗಳೂರಿನಲ್ಲಿ ನಡೆದಿದ್ದು ಬೃಹತ್ ಜನಾಧಿಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದ ಇಲ್ಯಾಸ್ ಮಹಮ್ಮದ್ ತುಂಬೆ, ದೇಶವನ್ನು ಈ ಹಿಂದೆ ಕಾಂಗ್ರೆಸ್ ನವರು ಮಾರಿದ್ದರು, ಈಗ ಬಿಜೆಪಿಯವರು ಮಾರುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಖಾಸಗೀಕರಣ ಆರಂಭಗೊಂಡದ್ದು ಕಾಂಗ್ರೆಸ್ ಕಾಲಾವಧಿಯಲ್ಲಿ. ಹಾಗೆ ಆರಂಭಗೊಂಡ ಸರ್ಕಾರಿ ಸ್ವತ್ತುಗಳ ಮಾರಾಟ ಇಂದು ಬಿಜೆಪಿಯವರೆಗೂ ಮುಂದುವರಿದುಕೊಂಡು ಹೋಗುತ್ತಿದೆ ಎಂದು ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿಕೆ ನೀಡಿದ್ದರು.
ಇಲ್ಯಾಸ್ ತುಂಬೆ ಹೇಳಿಕೆ ವಾಸ್ತವವಾಗಿದ್ದರೂ, ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿಗ ಕಮ್ಯುನಿಸ್ಟರನ್ನು ತೀವ್ರವಾಗಿ ಕೆರಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಾಡು ಕೊನೆಗೊಳಿಸುತ್ತಿದ್ದಂತೆಯೇ ವೇದಿಕೆಯಲ್ಲೇ ಪ್ರಾಣ ಬಿಟ್ಟ ಖ್ಯಾತ ಗಾಯಕ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿರ್ಮಾಪಕ ಭಾ.ಮಾ.ಹರೀಶ್ ಆಯ್ಕೆ
ವೆಸ್ಟ್ ನೈಲ್ ಜ್ವರ ವ್ಯಕ್ತಿ ಸಾವು: ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ
ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ 7 ಮಂದಿ ಅಪಘಾತಕ್ಕೆ ಬಲಿ