ಮಳಲಿ ಮಸೀದಿ ವಿವಾದಕ್ಕೆ ಎಸ್ ಡಿಪಿಐ ಬಳಿಕ ಕಲ್ಲಡ್ಕ ಪ್ರಭಾಕರ್ ಭಟ್ ಎಂಟ್ರಿ! - Mahanayaka
3:17 AM Wednesday 11 - December 2024

ಮಳಲಿ ಮಸೀದಿ ವಿವಾದಕ್ಕೆ ಎಸ್ ಡಿಪಿಐ ಬಳಿಕ ಕಲ್ಲಡ್ಕ ಪ್ರಭಾಕರ್ ಭಟ್ ಎಂಟ್ರಿ!

malali
31/05/2022

ಬಂಟ್ವಾಳ: ಮಳಲಿ ಮಸೀದಿ ವಿವಾದಕ್ಕೆ ಎಸ್ ಡಿಪಿಐ ಎಂಟ್ರಿಯಾಗುತ್ತಿದ್ದಂತೆಯೇ ಇತ್ತ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಈ ವಿವಾದಕ್ಕೆ ಎಂಟ್ರಿಯಾಗಿದ್ದು, ಆ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟು ಕೊಟ್ಟು ಅಯೋಧ್ಯೆಯಂತೆ ಮಸೀದಿಗೆ ಬೇರೆ ಜಾಗ ನೀಡುವ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಮುಗಿಸಬೇಕಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಕಲ್ಲಡ್ಕ ಸಮೀಪದ ಸುಧೆಕ್ಕಾರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಚರ್ಚ್‌, ಮಸೀದಿಗಳು ಪ್ರಾರ್ಥನಾ ಮಂದಿರಗಳಾಗಿದ್ದು, ಅದನ್ನು ಎಲ್ಲಿ ಬೇಕಾದರೂ ನಿರ್ಮಾಣ ಮಾಡಬಹುದು. ಆದರೆ ದೇವಸ್ಥಾನ, ದೈವಸ್ಥಾನ ಪ್ರಶ್ನೆ ಇಟ್ಟು ಶಾಸ್ತ್ರೋಕ್ತವಾಗಿ ನಿರ್ಮಾಣ ಮಾಡಬೇಕಾಗುತ್ತದೆ ಎಂದರು.

ಮಳಲಿ ದೇವಸ್ಥಾನ ಪುಡಿ ಮಾಡಿ ಮಸೀದಿ ನಿರ್ಮಾಣ ಮಾಡಿರುವುದು ನಮಗೆ ನೋವು ತಂದಿದೆ. ಅಂದಿನ ಪರಿಸ್ಥಿತಿಯಲ್ಲಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿವ ಸಂದರ್ಭ ಹಿಂದೂಗಳು ಹೆದರಿ ಓಡಿ ಹೋಗಿದ್ದಾರೆ. ಆದರೆ ಹಿಂದಿನ ಕಾಲ ಹಾಗೂ ಈಗಿನ ಕಾಲದ ಹಿಂದೂ ಮಾನಸಿಕತೆಗೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಭಟ್ ಹೇಳಿದರು.

ಮಳಲಿ ಮಸೀದಿಯ ಸ್ಥಳದಲ್ಲಿ ಇರುವ ನಿರ್ಮಾಣ ದೇವಸ್ಥಾನದ್ದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದನ್ನು ಅರೇಬಿಯಾ ಶಿಲ್ಪಕಲೆ ಎಂದರೆ ನಾವು ಒಪ್ಪಿಕೊಳ್ಳುವುದಿಲ್ಲ.  ನಾವು ಎಂದಿಗೂ ಮುಸ್ಲಿಂ, ಕ್ರಿಶ್ಚಿಯನ್‌ ವಿರೋಧಿಗಳಲ್ಲ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ದೇವಸ್ಥಾನದ ಜಾಗವನ್ನು ಬಿಟ್ಟು ಕೊಡಬೇಕಿದೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅತಿಯಾಗಿ  ಟೀ ಕುಡಿಯುತ್ತೀರಾ? ಹಾಗಿದ್ದರೆ, ಕಾದಿದೆ ಅಪಾಯ!

ಮುಸ್ಲಿಮ್ ಮಹಿಳೆಯರ ಧಾರ್ಮಿಕ ವಸ್ತ್ರ ಬುರ್ಖಾ ಧರಿಸಿ ಅಸಭ್ಯ ನೃತ್ಯ!

ಬೊಮ್ಮಾಯಿಯವರೇ ನೆನಪಿರಲಿ,  ಮಸಿ ಬಳಿದದ್ದು ರಾಜ್ಯ ಸರ್ಕಾರದ ಮುಖಕ್ಕೆ: ಸಿದ್ದರಾಮಯ್ಯ ಕಿಡಿ

ಬೊಮ್ಮಾಯಿಯವರೇ ನೆನಪಿರಲಿ,  ಮಸಿ ಬಳಿದದ್ದು ರಾಜ್ಯ ಸರ್ಕಾರದ ಮುಖಕ್ಕೆ: ಸಿದ್ದರಾಮಯ್ಯ ಕಿಡಿ

ಇತ್ತೀಚಿನ ಸುದ್ದಿ