ಸಂಗೀತ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಗಾಯಕ - Mahanayaka
5:03 PM Wednesday 11 - December 2024

ಸಂಗೀತ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಗಾಯಕ

krishna kumar kunnath
01/06/2022

ಕೋಲ್ಕತ್ತಾ: ಕನ್ನಡ ಮತ್ತು ಭಾರತದ ಹಲವು ಭಾಷೆಗಳಲ್ಲಿ ಹಾಡಿದ್ದ  ಕೃಷ್ಣ ಕುಮಾರ್ ಕುನ್ನತ್ ಅವರು ಕೋಲ್ಕತ್ತಾದ ನಜ್ರುಲಾ ಮಂಚ್ ಆಡಿಟೋರಿಯಂನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಕೆಕೆ ಎಂದೇ ಗುರುತಿಸಲ್ಪಟ್ಟಿದ್ದ ಕೃಷ್ಣಕುಮಾರ್ ಕುನ್ನತ್ ಅವರಿಗೆ 53 ವರ್ಷಗಳಾಗಿತ್ತು. ಸಂಗೀತ ಕಾರ್ಯಕ್ರಮದಲ್ಲಿ ಕೃಷ್ಣಕುಮಾರ್ ಕುನ್ನತ್ ತೀವ್ರವಾಗಿ ಬಳಲಿದಂತೆ ಕಂಡು ಬಂದಿದ್ದರು. ಬಳಿಕ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.

ಪ್ರಾಥಮಿಕ ವರದಿಗಳ ಪ್ರಕಾರ ಕೃಷ್ಣಕುಮಾರ್ ಕುನ್ನತ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.  ಅವರ ನಿಧನಕ್ಕೆ ಬಾಲಿವುಡ್ ಗಣ್ಯರು, ಗಾಯಕರು ಪ್ರಧಾನಿ ಮೋದಿ ಸಹಿತ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸರ್ಕಾರಕ್ಕೆ ಮತ್ತೆ ತಲೆನೋವು: ಕವಿತೆ, ಲಲಿತ ಪ್ರಬಂಧ ವಾಪಸ್‌ ಪಡೆದ ಇಬ್ಬರು ಲೇಖಕರು

ವಿಮಾನ ನಿಲ್ದಾಣದ ಪ್ರದರ್ಶನ ಫಲಕದಲ್ಲಿ ಅಶ್ಲೀಲ ಚಿತ್ರ ಪ್ರಸಾರ!

ಪಠ್ಯಪುಸ್ತಕದ ವಿಚಾರದಲ್ಲಿ ಸತ್ಯದ ವಿಷಯ ಮರೆಮಾಚುವ ಕೆಲಸ ಆಗ್ತಿದೆ: ಸದಾನಂದ ಗೌಡ

ದಲಿತ ಮಹಿಳೆಯರು ಪ್ರವೇಶಿಸಿದ ದೇವಸ್ಥಾನಕ್ಕೆ ಬೀಗ: ನಾಪತ್ತೆಯಾದ ಧರ್ಮ ರಕ್ಷಕರು!

ಇತ್ತೀಚಿನ ಸುದ್ದಿ