ಮದ್ಯದ ಮತ್ತಿನಲ್ಲಿ ಟ್ರಕ್ ಚಾಲನೆ: ಸರಣಿ ಅಪಘಾತ ನಡೆಸಿ ಚಾಲಕ ಪರಾರಿ!
ಮಂಗಳೂರು: ಮದ್ಯದ ಅಮಲಿನಲ್ಲಿದ್ದ ಟ್ರಕ್ ಚಾಲಕನೊಬ್ಬ ಜೂ.1ರ ಬುಧವಾರ ರಾತ್ರಿ ಕಾರು, ಬೈಕ್ ಮತ್ತು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಪೊಲೀಸರು ಚಾಲಕನನ್ನು ಪತ್ತೆಹಚ್ಚಿ ಬಂಧಿಸಿರುವ ಘಟನೆ ನಡೆದಿದೆ.
ಸುರತ್ಕಲ್ ಬಳಿ ಸಾರ್ವಜನಿಕರ ಸಹಾಯದಿಂದ ಕೈಲಾಶ್ ಪಾಟೀಲ್ (42) ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಲಾರಿ ಕ್ಲೀನರ್ ತಲೆಮರೆಸಿಕೊಂಡಿದ್ದಾನೆ.
ಆರೋಪಿ ಚಾಲಕ ಕೈಲಾಶ್ ಪಾಟೀಲ್ ಸುರತ್ಕಲ್ ಜಂಕ್ಷನ್‌ನಲ್ಲಿ ಮೊದಲಿಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಸುರತ್ಕಲ್ ರೈಲ್ವೆ ಸೇತುವೆ ಬಳಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಜಖಂಗೊಂಡಿದ್ದು, ಮೂವರು ಗಾಯಗೊಂಡಿದ್ದಾರೆ.
ಈ ಹಿಂದೆ ಬೈಕಂಪಾಡಿಯಲ್ಲಿ ಕಾರು ಅಪಘಾತಕ್ಕೀಡ ಘಟನೆ ಸೇರಿದಂತೆ ಸರಣಿ ರಸ್ತೆ ಅಪಘಾತದಲ್ಲಿ ಭಾಗಿಯಾಗಿದ್ದಕ್ಕಾಗಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಕ್ಕಾಗಿ ಬಾಲಕಿಗೆ 14 ಬಾರಿ ಇರಿದ ಪಾಪಿ!
ಸಚಿವ ನಾಗೇಶ್ ಮನೆಗೆ ಮುತ್ತಿಗೆ ಹಾಕಿ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ
ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ: ಮುಸ್ಲಿಂ ಸಮಾವೇಶದಲ್ಲಿ ಕೇಳಿ ಬಂದ ಅಭಿಪ್ರಾಯಗಳೇನು?
ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ: ಇಬ್ಬರು ಪೊಲೀಸ್ ವಶಕ್ಕೆ