ಮಕ್ಕಳು ಅಳುತ್ತಾರೆ ಎಂದು ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಾಯಿ!:  ಬೆಚ್ಚಿ ಬೀಳಿಸುವಂತಿದೆ ಈ ಘಟನೆ - Mahanayaka

ಮಕ್ಕಳು ಅಳುತ್ತಾರೆ ಎಂದು ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಾಯಿ!:  ಬೆಚ್ಚಿ ಬೀಳಿಸುವಂತಿದೆ ಈ ಘಟನೆ

maharashtra
03/06/2022

ಮುಂಬೈ: ಮಕ್ಕಳು ಅಳುತ್ತಾರೆ ಎಂದು ಪಾಪಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಮೃತದೇಹವನ್ನು ಸುಟ್ಟು ಹಾಕಿದ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

30 ವರ್ಷ ವಯಸ್ಸಿನ ಧುರ್ಪಾದಬಾಯಿ  ಗಣಪತ್ ನಿಮಲವಾಡ್ ಎಂಬಾಕೆ ತನ್ನಿಬ್ಬರು ಮಕ್ಕಳು ಅಳುವ ಸದ್ದಿನಿಂದ ಸಿಟ್ಟಿಗೆದ್ದು ಮಕ್ಕಳನ್ನು ಕೊಂದು ಹಾಕಿದ್ದಾಳೆ.

ಮೇ 31ರಂದು ನಾಲ್ಕು ತಿಂಗಳ ಹೆಣ್ಣು ಮಗು ಅನಸೂಯಾ ಜೋರಾಗಿ ಅತ್ತಿದ್ದು, ಇದರಿಂದ ಸಿಟ್ಟಿಗೆದ್ದ  ಧುರ್ಪಾದಬಾಯಿ ಮಗುವನ್ನು ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿ, ತನ್ನ ತಾಯಿ ಮತ್ತು ಸಹೋದರನ ಸಹಾಯದೊಂದಿಗೆ ಮೃತದೇಹವನ್ನು ಸುಟ್ಟು ಹಾಕಿದ್ದಾಳೆ.

ಈ ಘಟನೆಯ ಮರುದಿನ, ಊಟ ಬೇಕು ಎಂದು ಅಳುತ್ತಿದ್ದ ಇನ್ನೊಬ್ಬ ಮಗ ದತ್ತನನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದು, ಆತನ ಮೃತದೇಹವನ್ನೂ ಸುಟ್ಟು ಹಾಕಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಧುರ್ಪಾದಬಾಯಿ ಹಾಗೂ ಆಕೆಯ ತಾಯಿ, ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಭೋಕೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅನಿಲ ಸೋರಿಕೆ: ಪ್ರಜ್ಞೆ ಕಳೆದುಕೊಂಡು ಬಿದ್ದ ಕಾರ್ಮಿಕರು: 30 ಮಂದಿ ಆಸ್ಪತ್ರೆಗೆ ದಾಖಲು

ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನ: ಸಿಸಿ ಟಿವಿ ದೃಶ್ಯಗಳಿಂದ ಸಿಕ್ಕಿ ಬಿದ್ದ ಕಾಮುಕ

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್:  ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಸಾವು

ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್: 7 ಮಂದಿ ಸಜೀವ ದಹನ

ಇತ್ತೀಚಿನ ಸುದ್ದಿ