12ರ ಬಾಲಕಿಯ ಮೇಲೆ ಲಿಫ್ಟ್ ನಲ್ಲಿ ಅತ್ಯಾಚಾರಕ್ಕೆ ಯತ್ನ - Mahanayaka
6:58 PM Wednesday 11 - December 2024

12ರ ಬಾಲಕಿಯ ಮೇಲೆ ಲಿಫ್ಟ್ ನಲ್ಲಿ ಅತ್ಯಾಚಾರಕ್ಕೆ ಯತ್ನ

lift
04/06/2022

ಸೂರತ್​: ಹದಿಹರೆಯದ ಹುಡುಗನೊಬ್ಬ ಲಿಫ್ಟ್​ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ.

ಇಡೀ ದೃಶ್ಯ ಲಿಫ್ಟ್‌ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 12 ವರ್ಷದ ಬಾಲಕಿಯೊಬ್ಬಳು ಲಿಫ್ಟ್‌ನಲ್ಲಿ ಹೋಗುತ್ತಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೂರತ್​ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ

11.30 ಸುಮಾರಿಗೆ ಲಿಫ್ಟ್​ನಿಂದ ಹೊರ ಹೋಗುವಾಗ ಆಕೆಯನ್ನು ಹುಡುಗನೊಬ್ಬ ಕೈಹಿಡಿದು ದಿಢೀರನೇ ಲಿಫ್ಟ್​ ಒಳಗೆ ಎಳೆದುಕೊಂಡಿದ್ದಾನೆ.ಬಾಲಕಿ ಲಿಫ್ಟ್​ ಬಾಗಿಲು ತೆರೆಯಲು ಯತ್ನಿಸಿದರು ಆತ ಬಿಡಲಿಲ್ಲ. ಆಕೆಯನ್ನು ಲಿಫ್ಟ್​ ಒಳಗೆ ತಬ್ಬಿಕೊಂಡು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಬಾಲಕಿ ಯತ್ನಿಸಿದ್ದಾಳೆ. ಆದರೆ, ಆಕೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಲಿಫ್ಟ್​ ಬಾಗಿಲು ತೆರೆದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ

ಸಂತ್ರಸ್ತ ಬಾಲಕಿಯ ವಯಸ್ಸು 12. ಲೈಂಗಿಕ ದೌರ್ಜನ್ಯ ಎಸಗಿದ ಹುಡುಗನ ವಯಸ್ಸು ಕೇವಲ 16. ಸಂತ್ರಸ್ತೆಯು ಸೂರತ್​ನ ದಿಂಡೋಲಿ ಪೆವಲಿಯನ್​ ಪ್ಲಾಜಾದ ನೆಲಮಾಳಿಯಲ್ಲಿ ಟೀ ಮಾರಾಟ ಮಾಡುವವನ ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆ 10.30ಕ್ಕೆ ಸಂತ್ರಸ್ತೆ, ಪೆವಲಿಯನ್​ ಪ್ಲಾಜಾದ ಮೂರನೇ ಮಹಡಿಯಲ್ಲಿರುವ ಕಾಳಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಲು ಲಿಫ್ಟ್ ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೌತಡ್ಕ ಮಹಾಗಣಪತಿ ದೇಗುಲಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿಷೇಧ!

ರೈತ ಮುಷ್ಕರದ ಪ್ರಭಾವವೂ ಆಳುವವರ ಕುತಂತ್ರಗಳೂ

ಆಂಧ್ರಪ್ರದೇಶದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕ, ನಿರ್ವಾಹಕನಿಗೆ ಮಾರಣಾಂತಿಕ ಹಲ್ಲೆ!

ಮಕ್ಕಳು ಅಳುತ್ತಾರೆ ಎಂದು ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಾಯಿ!:  ಬೆಚ್ಚಿ ಬೀಳಿಸುವಂತಿದೆ ಈ ಘಟನೆ

ಅನಿಲ ಸೋರಿಕೆ: ಪ್ರಜ್ಞೆ ಕಳೆದುಕೊಂಡು ಬಿದ್ದ ಕಾರ್ಮಿಕರು: 30 ಮಂದಿ ಆಸ್ಪತ್ರೆಗೆ ದಾಖಲು

 

ಇತ್ತೀಚಿನ ಸುದ್ದಿ